ಕರ್ನಾಟಕ

karnataka

ಆಡಳಿತಕ್ಕೆ ಚುರುಕು: ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾಯಿಸಿ ಸರ್ಕಾರ ಆದೇಶ

ಐಎಎಸ್, ಐಪಿಎಸ್ ಅಧಿಕಾರಗಳನ್ನ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

By

Published : Oct 31, 2022, 10:22 PM IST

Published : Oct 31, 2022, 10:22 PM IST

ಅಧಿಕಾರಿಗಳ ವರ್ಗಾಯಿಸಿ ಸರ್ಕಾರ ಆದೇಶ
ಅಧಿಕಾರಿಗಳ ವರ್ಗಾಯಿಸಿ ಸರ್ಕಾರ ಆದೇಶ

ಬೆಂಗಳೂರು: ಆಡಳಿತಕ್ಕೆ ಚುರುಕು ಮೂಡಿಸಲು ಐಎಎಸ್ ಹಾಗೂ ಐಪಿಎಸ್ ಅಧಿಕಾರಗಳನ್ನು ಸರ್ಕಾರ ವರ್ಗಾಯಿಸಿ ಆದೇಶ ಹೊರಡಿಸಿದೆ. ಆರು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆಗೊಳಿಸಿದ್ದರೆ, ಇಬ್ಬರನ್ನು ವರ್ಗಾವಣೆ ಮಾಡಲಾಗಿದೆ.

ಶೆಟ್ಟನ್ನವರ್​ ಅವರನ್ನು ಹಟ್ಟಿ ಚಿನ್ನದ ಗಣಿ ಕಂ.ಗೆ ಎಂಡಿಯಾಗಿ ನಿಯುಕ್ತಿಗೊಳಿಸಲಾಗಿದೆ. ಮಂಜುನಾಥ್.ಜೆ ಅವರಿಗೆ ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ಅಧಿಕಾರಿ ಹಾಗೂ ಪದನಿಮಿತ್ತ ಜಂಟಿ ಕಾರ್ಯದರ್ಶಿಯ ಹೊಣೆ ನೀಡಲಾಗಿದೆ. ಅನ್ನೀಸ್ ಕಣ್ಮಣಿ ಜಾಯ್ಸ್ ಅವರಿಗೆ ವಾಣಿಜ್ಯ ತೆರಿಗೆ ಇಲಾಖೆ (ಜಾರಿ) ಅಪರ ಆಯುಕ್ತರಾಗಿ ಸ್ಥಳ ನಿಯೋಜನೆ ಮಾಡಲಾಗಿದೆ. ಚಾರುಲತಾ ಸೋಮಲ್‌ರನ್ನು ದಿಲ್ಲಿಯ ಕರ್ನಾಟಕ ಭವನದ ಅಪರ ನಿವಾಸಿ ಆಯುಕ್ತರಾಗಿ ನಿಯುಕ್ತಿಗೊಳಿಸಲಾಗಿದೆ. ಬಸವರಾಜೇಂದ್ರರಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಇಲಾಖೆಯ ಜಂಟಿ ಕಾರ್ಯದರ್ಶಿಯ ಹೊಣೆ ನೀಡಲಾಗಿದೆ.

ಕವಿತಾ ಮಣ್ಣಿಕೆರಿ ಅವರನ್ನು ಕರ್ನಾಟಕ ಗೃಹ ನಿರ್ಮಾಣ ‌ಮಂಡಳಿಯ ಆಯುಕ್ತರಾಗಿ ನಿಯೋಜಿಸಲಾಗಿದೆ. ರವಿ ಕುಮಾರ್ ಎಂ.ಆರ್ ಅವರನ್ನು ದ.ಕನ್ನಡ ಡಿಸಿಯಾಗಿ ವರ್ಗಾಯಿಸಲಾಗಿದೆ. ವಸತಿ ಅಮರ್ ಅವರನ್ನು ಬೆಂಗಳೂರು ನಗರ ಜಿಲ್ಲೆ (ಉತ್ತರ) ವಿಶೇಷ ಡಿಸಿಯಾಗಿ ವರ್ಗಾಯಿಸಲಾಗಿದೆ.

11 ಐಪಿಎಸ್ ಅಧಿಕಾರಿಗಳ ವರ್ಗಾವಣೆ:11 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರದ್ದಾಗಿರುವ ಎಸಿಬಿಯಲ್ಲಿದ್ದ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಮಾಲಿನಿ‌ ಕೃಷ್ಣಮೂರ್ತಿಯನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯನ್ನಾಗಿ ವರ್ಗಾಯಿಸಲಾಗಿದೆ. ಸೀಮಂತ್ ಕುಮಾರ್ ಸಿಂಗ್ ಅವರನ್ನು ಕೆಎಸ್ಆರ್​​ಪಿಯ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ರವಿ.ಎಸ್ ಅವರನ್ನು ಸರ್ಕಾರದ ಕಾರ್ಯದರ್ಶಿ ಹಾಗೂ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಅಜಯ್ ಹಿಲೋರಿಯನ್ನು ಡಿಸಿಆರ್ ಇಯ ಎಸ್​ಪಿಯಾಗಿ ವರ್ಗಾಯಿಸಲಾಗಿದೆ. ಯತೀಶ್ ಚಂದ್ರರನ್ನು ಅಪರಾಧ-2ನ್ನು ಡಿಸಿಪಿಯನ್ನಾಗಿ ವರ್ಗಾಯಿಸಲಾಗಿದೆ. ಅಮರನಾಥ್ ರೆಡ್ಡಿ ಅವರನ್ನು ಕಲಬುರಗಿ ಗುಪ್ತಚರ ವಿಭಾಗದ ಎಸ್​ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಶ್ರೀಹರಿ ಬಾಬುರನ್ನು ಕರ್ನಾಟಕ ಲೋಕಾಯುಕ್ತದ ಎಸ್​​ಪಿಯಾಗಿ ವರ್ಗಾಯಿಸಲಾಗಿದೆ. ಶೋಭಾ ರಾಣಿರನ್ನು ಬಿಎಂಟಿಎಫ್​​ನ ಎಸ್​​ಪಿಯಾಗಿ ವರ್ಗಾಯಿಸಲಾಗಿದೆ.

ಸಾಜೀತ್​​ರನ್ನು ಕರ್ನಾಟಕ ಲೋಕಾಯುಕ್ತದ ಎಸ್​​ಪಿಯಾಗಿ, ರಾಮ್ ಅರಸಿದ್ದಿಯನ್ನು ಕರ್ನಾಟಕ ಲೋಕಾಯುಕ್ತ ಎಸ್​ಪಿಯಾಗಿ ವರ್ಗಾಯಿಸಲಾಗಿದೆ. ಬಾಬಾ ಸಾಬ್ ನೇಮಗೌಡರನ್ನು ಬೆಳಗಾವಿಯ ಗುಪ್ತಚರ ವಿಭಾಗದ ಎಸ್​​ಪಿಯಾಗಿ ವರ್ಗಾಯಿಸಲಾಗಿದೆ.

ಇದನ್ನೂ ಓದಿ: ಪೊಲೀಸ್ ದಂಪತಿ ಒಂದೇ ಠಾಣೆಯಲ್ಲಿ ಕೆಲಸ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ: ಪ್ರವೀಣ್ ಸೂದ್

ABOUT THE AUTHOR

...view details