ಬೆಂಗಳೂರು: ಹಿರಿಯ ಐಎಎಸ್ ಹಾಗು ಐಪಿಎಸ್ ಅಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೊಸ ವರ್ಷದ ಶುಭ ಕೋರಿದರು.
ಸಿಎಂಗೆ ಹೊಸ ವರ್ಷದ ಶುಭ ಕೋರಿದ ಐಎಎಸ್, ಐಪಿಎಸ್ ಅಧಿಕಾರಿಗಳು - ಐಎಎಸ್ ಹಾಗು ಐಪಿಎಸ್ ಅಧಿಕಾರಿಗಳು
ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಹೊಸ ವರ್ಷದ ಶುಭ ಕೋರಿದರು. ಅಧಿಕಾರಿಗಳೊಂದಿಗೆ ಬಿಎಸ್ವೈ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆಗಮಿಸಿ, ಸಿಎಂ ಯಡಿಯೂರಪ್ಪಗೆ ಹೊಸ ವರ್ಷದ ಶುಭ ಕೋರಿದರು. ನಂತರ ಅಪರ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳು ಆಗಮಿಸಿ ಸಿಎಂಗೆ ಹೊಸ ವರ್ಷದ ಶುಭಾಶಯ ಹೇಳಿದರು. ಬಳಿಕ ಹಿರಿಯ ಐಪಿಎಸ್ ಅಧಿಕಾರಿಗಳ ಜೊತೆ ಸಿಎಂ ಅನೌಪಚಾರಿಕವಾಗಿ ಕೆಲಕಾಲ ಮಾತುಕತೆ ನಡೆಸಿದರು.
ಐಎಎಸ್ ಅಧಿಕಾರಿಗಳ ನಂತರ ಐಪಿಎಸ್ ಅಧಿಕಾರಿಗಳು ಸಿಎಂ ಗೃಹ ಕಚೇರಿ ಕಾವೇರಿಗೆ ಆಗಮಿಸಿದರು. ಡಿಜಿ - ಐಜಿಪಿ ಮತ್ತು ಎಡಿಜಿಪಿ ದರ್ಜೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಹೊಸ ವರ್ಷದ ಶುಭ ಕೋರಿದರು. ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿಯೂ ಸಿಎಂ ಕೆಲಕಾಲ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು.