ಬೆಂಗಳೂರು: ಅಸಮಾಧಾನಿತ ಸಚಿವರನ್ನು ಕರೆದು ನಾನು ಮಾತನಾಡುತ್ತೇನೆ. ಎಲ್ಲರೂ ನಮ್ಮ ಸ್ನೇಹಿತರು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಎಲ್ಲಾ ಮಂತ್ರಿಗಳಿಗೂ ಖಾತೆ ಹಂಚಲಾಗಿದೆ. ಮುಂದೆ ಅವರವರ ಖಾತೆಗಳನ್ನು ಉತ್ತಮವಾಗಿ ನಿಭಾಯಿಸ್ತಾರೆ. ಅಸಮಾಧಾನಿತರನ್ನು ಕರೆದು ಮಾತನಾಡುತ್ತೇನೆ. ಎಲ್ಲರೂ ನನ್ನ ಸ್ನೇಹಿತರೇ ಎಂದರು.
ಸಂಘನಿಷ್ಠರಿಗೆ, ಹೊಸಬರಿಗೆ ಮಹತ್ವದ ಖಾತೆ ಕೊಟ್ಟ ವಿಚಾರವಾಗಿ ಮಾತನಾಡಿದ ಅವರು, ಆಡಳಿತದಲ್ಲಿ ಬದಲಾವಣೆ ತರಬೇಕು ಎಂದು ಖಾತೆ ಹಂಚಿಕೆ ಮಾಡಲಾಗಿದೆ. ದೇವೇಗೌಡರ ಮನೆಗೆ ಸಿಎಂ ಹೋಗಿದ್ದರಿಂದ ನನಗೆ ಸಚಿವ ಸ್ಥಾನ ತಪ್ಪಿದೆ ಎಂಬ ಪ್ರೀತಂಗೌಡ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ಅವರೆಲ್ಲರೂ ನನ್ನ ಸ್ನೇಹಿತರು, ಕರೆದು ಮಾತನಾಡುತ್ತೇನೆ ಎಂದರು.
ಯಾರಿಗೆಲ್ಲ ಅಸಮಾಧಾನ
ಜೊತೆಗೆ ಖಾತೆ ಹಂಚಿಕೆಯಾದ ಬೆನ್ನಲೆ ಕೆಲ ಸಚಿವರು ಅಸಮಾಧಾನಗೊಂಡಿದ್ದು, ತಮಗಿಷ್ಟವಾದ ಖಾತೆ ಸಿಗಲಿಲ್ಲ ಎಂಬ ಬೇಸರ ಹೊರಹಾಕಿದ್ದಾರೆ. ಪ್ರಮುಖವಾಗಿ ನನಗಿಷ್ಟವಾದ ಖಾತೆ ಹಂಚಿಕೆಯಾಗಿಲ್ಲ ಎಂದು ಸಚಿವ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.