ಕರ್ನಾಟಕ

karnataka

ETV Bharat / state

ಕೂಡಲಸಂಗಮ, ಹರಿಹರ ಪೀಠದ ಶ್ರೀಗಳನ್ನು ಭೇಟಿ ಮಾಡಿ ಚರ್ಚಿಸುತ್ತೇನೆ: ನಿರಾಣಿ - Koodalasangama and Harihara Peetha Shri in tumkur

ಕೂಡಲಸಂಗಮ, ಹರಿಹರ ಪೀಠದ ಶ್ರೀಗಳು ಕೂಡಲಸಂಗಮದಿಂದ ತುಮಕೂರಿನವರೆಗೆ ಕಾಲ್ನಡಿಗೆ ಜಾಥಾ ಮೂಲಕ ಬಂದಿದ್ದಾರೆ. ಸಿಎಂ ಭೇಟಿಯಾಗಿ ಅವರನ್ನು ಅಭಿನಂದಿಸಬೇಕೆಂದು ಹೇಳಿದ್ದಾರೆ. ಅಧಿವೇಶನ ಹಿನ್ನೆಲೆ ಅವಕಾಶ ಸಾಧ್ಯವಾಗಿರಲಿಲ್ಲ. ಇಂದು ಹೋಗಿ ಮಾತಾಡಿ ನಗರಕ್ಕೆ ಬರುವಂತೆ ಮನವಿ ಮಾಡುತ್ತೇನೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

Murugesh Nirani
ಮುರುಗೇಶ್ ನಿರಾಣಿ

By

Published : Feb 10, 2021, 5:54 PM IST

Updated : Feb 10, 2021, 7:31 PM IST

ಬೆಂಗಳೂರು: ಕೂಡಲಸಂಗಮ, ಹರಿಹರ ಪೀಠದ ಶ್ರೀಗಳ ಹೋರಾಟಕ್ಕೆ ಸಂಬಂಧಿಸಿದಂತೆ ಇಂದು ತುಮಕೂರಿನಲ್ಲಿ ಶ್ರೀಗಳನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಸಚಿವ ಮುರುಗೇಶ್ ನಿರಾಣಿ

ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೂಡಲಸಂಗಮದಿಂದ ತುಮಕೂರಿನವರೆಗೆ ಕಾಲ್ನಡಿಗೆ ಜಾಥಾ ಮೂಲಕ ಬಂದಿದ್ದಾರೆ. ಸಿಎಂ ಭೇಟಿಯಾಗಿ ಅವರನ್ನು ಅಭಿನಂದಿಸಬೇಕೆಂದು ಹೇಳಿದ್ದಾರೆ. ಅಧಿವೇಶನ ಹಿನ್ನೆಲೆ ಅವಕಾಶ ಸಾಧ್ಯವಾಗಿರಲಿಲ್ಲ. ಇಂದು ಹೋಗಿ ಮಾತಾಡಿ ನಗರಕ್ಕೆ ಬರುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಓದಿ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಸುಸಜ್ಜಿತ ವಸತಿ ನಿಲಯ

ಸಮುದಾಯದಲ್ಲಿ ಕಡುಬಡವರು ಇದ್ದಾರೆ. ಶೈಕ್ಷಣಿಕವಾಗಿಯೂ ಹಿಂದುಳಿದಿದ್ದಾರೆ. ಹಿಂದೆಯೇ 2ಎ ಮೀಸಲಾತಿ ಅಗತ್ಯವಿದೆ ಎಂದು ಸಿಎಂ ಉಪಸಮಿತಿ ಮಾಡಿದ್ದರು. ನಾನು, ಬೊಮ್ಮಾಯಿ, ಉದಾಸಿ, ಕಾರಜೋಳ ಸದಸ್ಯರಾಗಿದ್ದೆವು. ಕಾನೂನು ತೊಡಕು ಬಂದಿದ್ದರಿಂದ ತಟಸ್ಥವಾಗಿತ್ತು. ಈಗ ಮತ್ತೆ ಶಾಂತಿಯುತ ಹೋರಾಟ ನಡೆಯುತ್ತಿದೆ. ನಾವು ತುಮಕೂರಿಗೆ ಭೇಟಿ ನೀಡುತ್ತೇವೆ. ಶ್ರೀಗಳಿಗೆ ಮನವಿ ಮಾಡುತ್ತೇವೆ. ವಿಧಾನಸೌಧಕ್ಕೆ ಯಾವ ಮುತ್ತಿಗೆಯನ್ನೂ ಹಾಕಲ್ಲ. ಸಿಎಂ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಲ್ಲ. ಈ ಬಗ್ಗೆ ಇಂದು ಸಂಜೆ ಚರ್ಚೆ ಮಾಡ್ತವೆ ಎಂದರು.

ಶಿವಮೊಗ್ಗ ಸ್ಫೋಟ ತನಿಖೆ ಪ್ರಗತಿ:

ಶಿವಮೊಗ್ಗ ಸ್ಫೋಟ ಪ್ರಕರಣ ಕುರಿತು ಮಾತನಾಡಿದ ಅವರು, ತನಿಖೆ ಮುಂದುವರೆದಿದೆ. ನಾಲ್ಕು ಪ್ರಕರಣ ದಾಖಲಿಸಲಾಗಿದೆ. ಜಿಲೆಟಿನ್ ಪೂರೈಸಿದವರ ಮೇಲೂ ಎಫ್​ಐಆರ್ ಆಗಿದೆ. ಅಕ್ರಮಕ್ಕೆ ಅವಕಾಶ ಕೊಟ್ಟವರ ಮೇಲೂ ತನಿಖೆ ನಡೆಸುತ್ತಿದ್ದೇವೆ. ಅಧಿಕಾರಿಗಳ ಮೇಲೂ ತನಿಖೆ ಮುಂದುವರೆದಿದೆ. ತಪ್ಪು ಮಾಡಿದ್ರೆ ಕ್ರಮ ಆಗಲಿದೆ. ತಪ್ಪು ಮಾಡದವರಿಗೆ ಶಿಕ್ಷೆಯಾಗಬಾರದು. ಆ ರೀತಿ ವಿಳಂಬವಾದರೂ ಸರಿಯಾಗಿ ತನಿಖೆ ನಡೆಸುತ್ತೇವೆ ಎಂದರು.

Last Updated : Feb 10, 2021, 7:31 PM IST

ABOUT THE AUTHOR

...view details