ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಮೈತ್ರಿ ಸೋಲಿನ ನೈತಿಕ ಹೊಣೆ ಹೊರುವೆ ಎಂದು ಹೇಳಿದ್ದಾರೆ.
ಈ ಕಳಪೆ ಫಲಿತಾಂಶದ ಎಲ್ಲಾ ರೀತಿಯ ನೈತಿಕ ಹೊಣೆ ನಾನೇ ಹೊರುವೆ: ದಿನೇಶ್ ಗುಂಡೂರಾವ್ - ಕಾಂಗ್ರೆಸ್ ಸೋಲು
ಪಕ್ಷ ಸ್ಥಾನ ತ್ಯಾಗಕ್ಕೆ ಸೂಚನೆ ಕೊಟ್ಟರೆ ಅದಕ್ಕೂ ನಾನು ಸಿದ್ಧ. ನನ್ನ ಅವಧಿಯಲ್ಲಿ ಈ ಸೋಲು ಬಹಳ ಬೇಸರ ತಂದಿದೆ. ಈ ಸಮಯದಲ್ಲಿ ಪಕ್ಷ ಕಟ್ಟುವ ವಿಚಾರಕ್ಕೆ ಮುಂದಾಗಬೇಕಿದೆ. ನಾನು ಈಗ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಹಾಗೂ ಸಿಎಂ ಜತೆ ಮಾತನಾಡುವೆ. ಫಲಿತಾಂಶ ತುಂಬಾ ಪರಿಣಾಮ ಬೀರಲಿದೆ.
ಪಕ್ಷ ಸ್ಥಾನ ತ್ಯಾಗಕ್ಕೆ ಸೂಚನೆ ಕೊಟ್ಟರೆ ಅದಕ್ಕೂ ನಾನು ಸಿದ್ಧ. ನನ್ನ ಅವಧಿಯಲ್ಲಿ ಈ ಸೋಲು ಬಹಳ ಬೇಸರ ತಂದಿದೆ. ಈ ಸಮಯದಲ್ಲಿ ಪಕ್ಷ ಕಟ್ಟುವ ವಿಚಾರಕ್ಕೆ ಮುಂದಾಗಬೇಕಿದೆ. ನಾನು ಈಗ ಸಿದ್ದರಾಮಯ್ಯ, ಹೈಕಮಾಂಡ್ ಹಾಗೂ ಸಿಎಂ ಜತೆ ಮಾತನಾಡುವೆ. ಫಲಿತಾಂಶ ತುಂಬಾ ಪರಿಣಾಮ ಬೀರಲಿದೆ.
ನಾನು ಕಾಂಗ್ರೆಸ್ ಅಧ್ಯಕ್ಷ ಆಗಿರುವ ವೇಳೆ ಕಳಪೆ ಫಲಿತಾಂಶ ಬಂದಿದೆ. ಎಲ್ಲ ಜವಾಬ್ದಾರಿ ಹೊರಲು ನಾನು ರೆಡಿ. ಪಕ್ಷದ ನಾಯಕರ ಜೊತೆ ಈ ಬಗ್ಗೆ ತೀರ್ಮಾನ ಮಾಡುತ್ತೇನೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ.12ರಿಂದ 14 ಸೀಟ್ ಬರುವ ನಿರೀಕ್ಷೆ ಇತ್ತು ಆದರೆ ಫಲಿತಾಮಶವೇ ಬೇರೆಯಾಗಿದೆ. ಜನರ ತೀರ್ಪು ಸ್ವಾಗತ ಮಾಡುತ್ತೇನೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಆ ಬಗ್ಗೆ ಮೋದಿ ಗಮನ ಹರಿಸಲಿ. ಭಾವನಾತ್ಮಕ ವಿಚಾರಗಳನ್ನ ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದರು.
TAGGED:
ಕಾಂಗ್ರೆಸ್ ಸೋಲು