ಕರ್ನಾಟಕ

karnataka

ETV Bharat / state

ಡಿಕೆಶಿ ಮುಖ್ಯಮಂತ್ರಿಯಾದರೆ ಖುಷಿ ಪಡುವೆ: ಡಿ.ಕೆ.ಸುರೇಶ್​ - Karnataka Assembly Election Result

ಇಂದು ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್​ ಪಕ್ಷ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ಬಗ್ಗೆ ಸಂಸದ ಡಿ.ಕೆ.ಸುರೇಶ್​ ಖುಷಿ ವ್ಯಕ್ತಪಡಿಸಿದರು.

I will be the happiest person if DKS becomes the CM, says DK Suresh
I will be the happiest person if DKS becomes the CM, says DK Suresh

By

Published : May 13, 2023, 7:26 PM IST

ಬೆಂಗಳೂರು:ಸಹೋದರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ನನಗೆ ಖುಷಿ ಎಂದು ಸಂಸದ ಡಿ.ಕೆ.ಸುರೇಶ್​ ಪ್ರತಿಕ್ರಿಯಿಸಿದರು. ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓರ್ವ ಸಾಮಾನ್ಯ ವ್ಯಕ್ತಿಯಾಗಿ ಹಾಗೂ ಅವರ ಸಹೋದರನಾಗಿ ಡಿ.ಕೆ.ಶಿವಕುಮಾರ್ ಈ ರಾಜ್ಯದ ಮುಖ್ಯಮಂತ್ರಿಯಾದರೆ ನಾನೇ ಹೆಚ್ಚು ಸಂತೋಷಪಡುತ್ತೇನೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಪಕ್ಷದ ಮುಂದಿನ ನಿರ್ಧಾರ ಹಾಗೂ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಅವರು, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಆದರೆ ಸಹೋದರನಾಗಿ ನನಗೆ ಬಹಳ ಖುಷಿ. ಓರ್ವ ಸಾಮಾನ್ಯ ವ್ಯಕ್ತಿಯಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬಯಸುವೆ ಎಂದು ಡಿ.ಕೆ.ಸುರೇಶ್ ತಮ್ಮ ಅನಿಸಿಕೆ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದರ ಬಗ್ಗೆ ಮಾತನಾಡಿ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ: 11 ಕ್ಷೇತ್ರ ಕೈ ವಶ, 8 ಸ್ಥಾನ‌ ಬಿಜೆಪಿ‌ ಮಡಿಲಿಗೆ

ABOUT THE AUTHOR

...view details