ಬೆಂಗಳೂರು:ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ ಇನ್ನೊಬ್ಬ ಸ್ನೇಹಿತ ಕುಮಟಳ್ಳಿ ಬಗ್ಗೆ ಮಾತನಾಡಿದ್ದನ್ನು ಯಾರೋ ವಿಡಿಯೋ ಮಾಡಿ ಮಹೇಶ್ ಕುಮಟಳ್ಳಿಗೆ ಲಿಂಕ್ ಮಾಡಿ ಹರಿ ಬಿಟ್ಟಿದ್ದಾರೆ. ನಮ್ಮಿಬ್ಬರ ಸ್ನೇಹದ ನಡುವೆ ಭಿನ್ನಾಭಿಪ್ರಾಯ ಹುಟ್ಟುಹಾಕುವ ಪ್ರಯತ್ನ ವನ್ನು ಯಾರೋ ನಡೆಸಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ನಾನು ಮಾತನಾಡಿದ್ದು ಮತ್ತೊಬ್ಬ ಕುಮಟಳ್ಳಿ ಬಗ್ಗೆ : ವಿವಾದಕ್ಕೆ ಸ್ಪಷ್ಟನೆ ನೀಡಿದ ಡಿಸಿಎಂ - ಅನರ್ಹ ಶಾಸಕ ಮಹೇಶ್ ಕುಮಟಳ್ಳಿ
ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ತಪ್ಪಾಗಿ ಮಾತಾಡಿಲ್ಲ. ನಾನು ಮಾತಾಡಿರುವ ವಿಡಿಯೋ ಬೇರೆ ಕುಮಟಳ್ಳಿ ಅವರಿಗೆ ಸಂಬಂಧಿಸಿದ್ದು. ಎರಡು ತಿಂಗಳ ಹಿಂದೆ ಕೃಷ್ಣನದಿ ನೆರೆ ಬಂದಾಗ ನಾನು ಮಾತಾಡಿದ ವಿಡಿಯೋ ಈಗ ವೈರಲ್ ಆಗಿದೆ. ಈ ಹೇಳಿಕೆಗೂ ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೂ ಸಂಬಂಧವಿಲ್ಲ ಎಂದಿದ್ದಾರೆ.
ಘಟನೆ ಸಂಬಂಧ ವಿಡಿಯೋ ಪ್ರತಿಕ್ರಿಯೆ ಬಿಡುಗಡೆ ಮಾಡಿರುವ ಸವದಿ, ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ತಪ್ಪಾಗಿ ಮಾತಾಡಿಲ್ಲ. ನಾನು ಮಾತಾಡಿರುವ ವಿಡಿಯೋ ಬೇರೆ ಕುಮಟಳ್ಳಿ ಅವರಿಗೆ ಸಂಬಂಧಿಸಿದ್ದು. ಎರಡು ತಿಂಗಳ ಹಿಂದೆ ಕೃಷ್ಣನದಿ ನೆರೆ ಬಂದಾಗ ನಾನು ಮಾತಾಡಿದ ವಿಡಿಯೋ ಈಗ ವೈರಲ್ ಆಗಿದೆ. ಈ ಹೇಳಿಕೆಗೂ ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೂ ಸಂಬಂಧವಿಲ್ಲ ಎಂದಿದ್ದಾರೆ.
ನನ್ನ ಮತ್ತು ಮಹೇಶ ಕುಮಟಳ್ಳಿ ಮಧ್ಯೆ ಭಿನ್ನಾಭಿಪ್ರಾಯ ತರುವ ಪ್ರಯತ್ನ ನಡೆದಿದೆ. ಚುನಾವಣೆ ಘೋಷಣೆಯಾದ ಕಾರಣ ಇದರ ಲಾಭ ಪಡೆಯಲು ಇಂತಹ ಪ್ರಯತ್ನ ಮಾಡಲಾಗಿದೆ. ಕೆಲ ಸ್ಥಳೀಯ ಜನ ಭಿನ್ನಾಭಿಪ್ರಾಯ ಹುಟ್ಟುಹಾಕುತ್ತಿದ್ದಾರೆ ಅನರ್ಹ ಶಾಸಕರಾಗಿರುವ ಮಹೇಶ್ ಕುಮಟಳ್ಳಿ ಜೊತೆಗೆ ನನಗೆ ಭಿನ್ನಾಭಿಪ್ರಾಯವಿಲ್ಲ. ನಾನು ಮತ್ತು ಮಹೇಶ್ ಕುಮಟಳ್ಳಿ ಮುಂದಿನ ದಿನಗಳಲ್ಲಿ ಜೊತೆಯಾಗಿಯೇ ಹೋಗ್ತೇವೆ. ಸ್ನೇಹಿತರಾಗಿರುವ ಮಹೇಶ್ ಕುಮಟಳ್ಳಿ ಜೊತೆಗೆ ಯಾವುದೇ ತಪ್ಪು ಅಭಿಪ್ರಾಯವಿಲ್ಲ ಎಂದಿದ್ದಾರೆ.