ಕರ್ನಾಟಕ

karnataka

ETV Bharat / state

ಈಗ್ಲೂ ನಾನು ಸಿಎಂ ಸ್ಥಾನದ ಆಕಾಂಕ್ಷಿ, ಡಿಸಿಎಂ ಹುದ್ದೆ ಬೇಡ್ವೇ ಬೇಡ: ಉಮೇಶ್ ಕತ್ತಿ - ನಾನು ಸಿಎಂ ಹುದ್ದೆಯ ಆಕಾಂಕ್ಷಿ : ಉಮೇಶ್​ ಕತ್ತಿ

ನನಗೆ ಡಿಸಿಎಂ ಹುದ್ದೆ ಬೇಕಾಗಿಲ್ಲ. ಕೊಟ್ಟರೆ ಮಂತ್ರಿ ಸ್ಥಾನ ಕೊಡಲಿ ಡಿಸಿಎಂ ಬೇಡ. ಇದರಲ್ಲಿ‌ ಬೇರೆ ಪ್ರಶ್ನೆಯೇ ಇಲ್ಲ. ಆದ್ರೆ ಮಂತ್ರಿ ಆಗುತ್ತೇನೆ, ಸಿಎಂ ಸ್ಥಾನ ಕೊಟ್ರೂ ಆಗುತ್ತೇನೆ. ಡಿಸಿಎಂ ಹುದ್ದೆ ನನಗೆ ಬೇಕಿಲ್ಲ ಎಂದು ಶಾಸಕ ಉಮೇಶ್​ ಕತ್ತಿ ಹೇಳಿದ್ದಾರೆ.

Umesh katti
ಉಮೇಶ್ ಕತ್ತಿ

By

Published : Dec 12, 2019, 6:10 PM IST

ಬೆಂಗಳೂರು:ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೆ. ಈಗಲೂ, ಮುಂದೆಯೂ ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಶಾಸಕ‌‌ ಉಮೇಶ್‌ ಕತ್ತಿ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಉಮೇಶ್​ ಕತ್ತಿ

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಎಂಟು ಸಲ‌ ಶಾಸಕನಾಗಿದ್ದೇನೆ. ಕಳೆದ‌ ಮೂರು ನಾಲ್ಕು ತಿಂಗಳಿಂದ ನನಗೆ‌ ಅಧಿಕಾರ ಕೊಟ್ಟಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಮಂತ್ರಿಯಾಗಲೀ ಆಗದಿರಲಿ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ನನಗೆ ಡಿಸಿಎಂ ಹುದ್ದೆ ಬೇಕಾಗಿಲ್ಲ. ಕೊಟ್ಟರೆ ಮಂತ್ರಿ ಸ್ಥಾನ ಕೊಡಲಿ ಡಿಸಿಎಂ ಬೇಡ. ಇದರಲ್ಲಿ‌ ಬೇರೆ ಪ್ರಶ್ನೆಯೇ ಇಲ್ಲ. ಆದರೆ ಮಂತ್ರಿ ಆಗುತ್ತೇನೆ ಇಲ್ಲ, ಸಿಎಂ ಸ್ಥಾನ ಕೊಟ್ರೂ ಆಗುತ್ತೇನೆ. ಡಿಸಿಎಂ ಹುದ್ದೆ ನನಗೆ ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details