ಬೆಂಗಳೂರು : ಮನುಷ್ಯನ ಸುಸ್ಥಿರ ಆರೋಗ್ಯಕ್ಕಾಗಿ ಪೌಷ್ಠಿಕಾಂಶ ಹಾಗೂ ಸಮತೋಲಿತ ಆಹಾರ ಮುಖ್ಯವಾಗಲಿದೆ. ಹೀಗಾಗಿ ನನ್ನ ಫೇವರೇಟ್ ಬಟರ್ ಚಿಕನ್ ಆದರೂ ಪ್ರೋಟೀನ್ ಅಂಶವಿರುವ ಸಸ್ಯಾಹಾರಕ್ಕೆ ಆದ್ಯತೆ ನೀಡುವೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಹೇಳಿದ್ದಾರೆ.
ಫಿಟ್ ನೆಸ್ ಗಾಗಿ ಸಮತೋಲನದ ಆಹಾರ :ಅಬರೇಟ್ ಫುಡ್ಸ್ ಕಂಪನಿ ಸೇರಿ ವಿವಿಧ ಕಂಪೆನಿಗಳ ಪಾಲುದಾರಿಕೆಯಲ್ಲಿ ಶಾಖಾಹಾರಿ ಹೆಸರಿನ ಸ್ಟಾರ್ಟಪ್ ಕಂಪನಿಗೆ ಇಂದು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಅಧಿಕೃತ ಚಾಲನೆ ನೀಡಿ ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಸಮತೋಲಿತ ಹಾಗೂ ಪ್ರೋಟಿನ್ ಯುಕ್ತ ಆಹಾರ ಸೇವನೆ ಅತಿಮುಖ್ಯವಾಗಲಿದೆ.
ಭಾರತೀಯ ಸಂಸ್ಕೃತಿಯಲ್ಲಿ ಸಸ್ಯಾಹಾರಕ್ಕೆ ಅದರದ್ದೇ ಗೌರವವಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಜಿಮ್ ಅಥವಾ ದೈಹಿಕ ಕಸರತ್ತು ಮಾಡಲು ಸಮಯ ಸಿಗುವುದಿಲ್ಲ. ಹೆಚ್ಚು ಸಮಯ ಟ್ರಾಫಿಕ್ ನಲ್ಲಿ ಕಳೆಯಬೇಕಾಗುತ್ತದೆ. ಹೀಗಾಗಿ ದೀರ್ಘಕಾಲದ ಉತ್ತಮ ಆರೋಗ್ಯಕ್ಕಾಗಿ ಶಾಖಾಹಾರ ಸೇವನೆ ಅತಿ ಮುಖ್ಯವಾಗಿದೆ. ನಾನು ಬಟರ್ ಚಿಕನ್ ಸೇರಿದಂತೆ ಮಾಂಸಾಹಾರ ಇಷ್ಟಪಡುತ್ತೇನೆ, ಆದರೆ ನನ್ನ ಫಿಟ್ ನೆಸ್ ಗಾಗಿ ನಾನು ಹೆಚ್ಚು ಸಮತೋಲನದ ಆಹಾರ ಬಯಸುತ್ತೇನೆ ಎಂದರು.