ಬೆಂಗಳೂರು:ನೆರೆಹಾನಿ ಪರಿಹಾರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ನೆರೆಹಾನಿ ಕುರಿತು ಮೋದಿ ಜೊತೆ ಮಾತನಾಡಿದ್ದೇನೆ: ಸಿಎಂ ಬಿಎಸ್ವೈ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೂಡ ದೆಹಲಿಗೆ ಹೋದಾಗಲೂ ಚರ್ಚೆ ಮಾಡಿದ್ದೇನೆ. ಆನಂತರವೇ ಅಮಿತ್ ಶಾರನ್ನ, ಹಣಕಾಸು ಸಚಿವರನ್ನ ಕಳಿಸಿದ್ದಾರೆ. ಈಗಾಗಲೇ ಅಧಿಕಾರಿಗಳು ಬಂದು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ನಾಲ್ಕಾರು ದಿನಗಳಲ್ಲಿ ಪರಿಹಾರ ಬರಬಹುದು ಎಂದರು.
ಹೆಚ್ಚಿನ ಪ್ರಮಾಣದಲ್ಲಿ ನೆರವು ಬರಬಹುದು. ಬೇರೆಲ್ಲಾ ಕಾರ್ಯಗಳನ್ನ ಪಕ್ಕಕ್ಕೆ ಸರಿಸಿ ಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡುತ್ತೇನೆ. ಯಾವುದೇ ಕೊರತೆಯಾಗದಂತೆ ಜನರ ಕಷ್ಟಕ್ಕೆ ನಿಲ್ಲುತ್ತೇವೆ. ಈಗಾಗಲೇ ನೆರವು ನೀಡಲಾಗುತ್ತಿದೆ ಎಂದರು.
ಚಂದ್ರಯಾನ-2 ಸ್ವಲ್ಪದ್ರಲ್ಲಿ ಯಶಸ್ಸು ತಪ್ಪಿದೆ. ನಮ್ಮ ಇಸ್ರೋ ವಿಜ್ಞಾಗಳ ಆತ್ಮಸ್ಥೈರ್ಯ ಹೆಚ್ಚಿಸಿದೆ. ಇಂತಹ ಕೆಲಸ ಮಾಡಿದ ನಾಲ್ಕನೇ ರಾಷ್ಟ್ರ ನಮ್ಮದು. ಪ್ರಧಾನಿ ಮೋದಿ ಕೂಡ ಬೆನ್ನು ತಟ್ಟಿ ಧೈರ್ಯ ತುಂಬಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ವಿಜ್ಞಾನಿಗಳು ಯಶಸ್ಸು ಕಾಣುತ್ತಾರೆ ಎಂದರು.