ಕರ್ನಾಟಕ

karnataka

ETV Bharat / state

ದಿನೇಶ್ ಸಿಂಘಿ ಯಾರೆಂಬುದೇ ನನಗೆ ಗೊತ್ತಿಲ್ಲ: ಸಚಿವ ಆರ್.ಅಶೋಕ್ - I don't know who Dinesh Singhi, Ashok

ನಾನು ಆ ಹೆಸರನ್ನೇ ಕೇಳಿಲ್ಲ. ನೀವು ಹೇಳಿದಾಗಲೇ ಮೋದಲ‌ ಬಾರಿ ಹೆಸರು ಕೇಳುತ್ತಿದ್ದೇನೆ. ನಾನು ಆ ಹೆಸರಿನ ವ್ಯಕ್ತಿಗೆ ಶಿಫಾರಸ್ಸು ಮಾಡಿಲ್ಲ ಎಂದು ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.

r-ashok
ಆರ್.ಅಶೋಕ್

By

Published : Oct 22, 2020, 8:41 PM IST

ಬೆಂಗಳೂರು:ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾಗಿ ನೇಮಕಗೊಂಡ ಬೇಲೆಕೇರಿ ಗಣಿ ಅಕ್ರಮದ ಆರೋಪಿ ದಿನೇಶ್ ಸಿಂಘಿ ಯಾರೆಂಬುದೇ ನನಗೆ ಗೊತ್ತಿಲ್ಲ ಎಂದು ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ದಿನೇಶ್ ಸಿಂಘಿ ಹೆಸರನ್ನು ಆರ್.ಅಶೋಕ್ ಶಿಫಾರಸ್ಸು ಮಾಡಿದ್ದಾರೆ ಎಂಬ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಆ ಹೆಸರನ್ನೇ ಕೇಳಿಲ್ಲ. ನೀವು ಹೇಳಿದಾಗಲೇ ಮೋದಲ‌ ಬಾರಿ ಹೆಸರು ಕೇಳುತ್ತಿದ್ದೇನೆ. ನಾನು ಆ ಹೆಸರಿನ ವ್ಯಕ್ತಿಗೆ ಶಿಫಾರಸ್ಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.​ ಅಶೋಕ್​

ನನಗೆ ಆ ವ್ಯಕ್ತಿ ಬಗ್ಗೆ ಗೊತ್ತೇ ಇಲ್ಲ.‌ ಲೋಕಾಯುಕ್ತ ವರದಿಯಲ್ಲಿ ಹೆಸರು ಉಲ್ಲೇಖವಾಗಿರುವ ಉದ್ಯಮಿಯೊಬ್ಬರನ್ನು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಮಂಡಳಿ ಸದಸ್ಯನಾಗಿ ನೇಮಕವಾಗಿರುವ ದಿನೇಶ್‌ ಸಿಂಘಿ ಬಳ್ಳಾರಿಯ ಭಾರತ್‌ ಮೈನ್ಸ್‌ ಆ್ಯಂಡ್‌ ಮಿನರಲ್ಸ್‌ನ (ಬಿಎಂಎಂ) ಮಾಲೀಕರು. ಬಂದರಿನಿಂದ 21 ಲಕ್ಷ ಟನ್‌­ಗಳಷ್ಟು ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿ­ಸಿದಂತೆ 10 ನಗರಗಳ 19 ಕಡೆ ಸಿಬಿಐ 2014ರ ಫೆಬ್ರವರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಅಧಿಕಾರಿಗಳು ಬಿಎಂಎಂ ಕಚೇರಿ ಮೇಲೆ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿದ್ದರು.

ಕಾಂಗ್ರೆಸ್ ಅಂದರೆ ಗೂಂಡಾಗಿರಿ:

ನಮ್ಮದು ಬಿಜೆಪಿ ಅವರದ್ದು ಕಾಂಗ್ರೆಸ್‌. ಕಾಂಗ್ರೆಸ್ ಅಂದರೆ ಗೂಂಡಾಗಿರಿ ಎಂದು ಸಚಿವ ಆರ್.ಅಶೋಕ್ ಡಿಕೆಶಿಗೆ ಟಾಂಗ್ ನೀಡಿದರು. ಅವರು ಪೊಲೀಸ್ ಸ್ಟೇಷನ್​ನಲ್ಲೂ ಚುನಾವಣೆ ಮಾಡ್ತಾರೆ. ರೈಲ್ವೆ ಸ್ಟೇಷನ್​ನಲ್ಲೂ ಚುನಾವಣೆ ಮಾಡ್ತಾರೆ‌. ಆದರೆ ನಾವು‌ ಮಾತ್ರ ಪೋಲಿಂಗ್ ಬೂತ್​ನಲ್ಲೇ ಮಾಡುತ್ತೇವೆ‌‌‌‌. ಆರ್.ಆರ್.ನಗರದ ಐವರು ಕಾರ್ಪೊರೇಟರ್​ಗಳು ಮತ್ತು ಒಬ್ಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನೇ ಹಿಡಿದಿಟ್ಟುಕೊಳ್ಳಲು ಆಗಲಿಲ್ಲ. ನಮಗೆ ಆರ್.ಆರ್.ನಗರದಲ್ಲಿ ಕಾರ್ಯಕರ್ತರು ಓವರ್ ಪ್ಲೋ ಆಗುತ್ತಿದ್ದಾರೆ‌‌‌. ಆದರೆ ಅವರು ಕನಕಪುರ, ಕುಣಿಗಲ್​ನಿಂದ ಕಾರ್ಯಕರ್ತರನ್ನು ಕರೆದುಕೊಂಡು ಬರುತ್ತಿದ್ದಾರೆ‌ ಅಂದರೆ ಅವರ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಊಹಿಸಿ‌. ಅವರಿಗೆ ಆಗಲೇ ಸೋಲಿನ ವಾಸನೆ ಬಡಿದಿದೆ. ಅದಕ್ಕೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ABOUT THE AUTHOR

...view details