ಬೆಂಗಳೂರು: ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಪತ್ತೆಯಾಗಿರುವ ವರದಿಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲ ಊಹಾಪೋಹ, ಜನರು ಗಾಬರಿ ಆಗುವ ಅಗತ್ಯವಿಲ್ಲ. ಇದುವರೆಗೂ ಆ ರೀತಿಯ ಯಾವುದೇ ವೈರಸ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಡೆಲ್ಟಾ+ ವೈರಸ್ ಪತ್ತೆ ಬಗ್ಗೆ ಸಿಎಂ ಬಿಎಸ್ವೈಗೆ ಮಾಹಿತಿಯೇ ಇಲ್ಲವಂತೆ!
ಆರೋಗ್ಯ ಸಚಿವ ಸುಧಾಕರ್ ಅವರು ಡೆಲ್ಟಾ+ ವೈರಸ್ ಪತ್ತೆಯನ್ನ ದೃಢ ಪಡಿಸಿದ್ದಾರೆ. ಆದರೆ ಸಿಎಂ ಮಾತ್ರ ಇದೆಲ್ಲಾ ಊಹಾಪೋಹ ಎನ್ನುತ್ತಿದ್ದು, ಅಚ್ಚರಿ ಹೇಳಿಕೆ ನೀಡಿದ್ದಾರೆ.
ಡೆಲ್ಟಾ+ ವೈರಸ್ ಪತ್ತೆ ಬಗ್ಗೆ ಸಿಎಂ ಬಿಎಸ್ವೈಗೆ ಮಾಹಿತಿಯೇ ಇಲ್ಲವಂತೆ!
ಆರೋಗ್ಯ ಸಚಿವ ಸುಧಾಕರ್ ಅವರೇ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿರುವುದನ್ನು ದೃಢ ಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ ಬಗ್ಗೆ ಅಗತ್ಯವಿರುವ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಆರ್. ಅಶೋಕ ಅಪೇಕ್ಷೆಯಂತೆ ಎಂಟಿಬಿ ನಾಗರಾಜಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಹೇಳಿದರು. ಸಚಿವ ಸಿ.ಪಿ. ಯೋಗೇಶ್ವರಗೆ ಕೋಲಾರ ಉಸ್ತುವಾರಿ ಕೊಡುವ ನಿರ್ಧಾರ ಮಾಡಲಾಗಿದೆ ಎಂದು ಹೆಬ್ಬಾಳದ ಪಶುಭವನದಲ್ಲಿ ಪಶು ಸಹಾಯವಾಣಿ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.