ಬೆಂಗಳೂರು: ನನಗೆ ಪಕ್ಷ ಬಿಡುವ ಅನಿವಾರ್ಯತೆಯೂ ಇಲ್ಲ, ಅಗತ್ಯತೆಯೂ ಇಲ್ಲ ಎಂದು ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆಯುತ್ತಿರುವ ಸಭೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕಾಂಗ್ರೆಸ್ ಅಧ್ಯಕ್ಷರೇ ಆಹ್ವಾನ ನೀಡಿದ್ರೂ ನಾನು ಹೋಗುವುದಿಲ್ಲ ಎಂದರು.
ಜೆಡಿಎಸ್ ಶಾಸಕ ಎ.ಮಂಜುನಾಥ್.. ಮಾಜಿ ಶಾಸಕ ಬಾಲಕೃಷ್ಣ ಅವರು ಮತ್ತು ನಾನು ರಾಜಕೀಯ ಬದ್ಧ ವೈರಿಗಳೇ. ಹೋಟೆಲ್‌ನಲ್ಲಿ ಮುಖಾಮುಖಿಯಾದ ಸಂದರ್ಭದಲ್ಲಿ ಎರಡು ನಿಮಿಷ ಮಾತನಾಡಿದ್ದು ನಿಜ. ರಾಜಕೀಯವಾಗಿ ನಾವು ಯಾವುದೇ ಚರ್ಚೆಮಾಡಿಲ್ಲ. ನಾವು ಜೊತೆಯಲ್ಲಿ ಫೋಟೋ, ವಿಡಿಯೋ ತೆಗೆದುಕೊಂಡ್ರೆ ಪಕ್ಷ ಬಿಡ್ತಾರೆ ಎಂದು ಅರ್ಥ ಅಲ್ಲ ಹೇಳಿದರು.
ನಾವು ರಾಜಕೀಯ ವೈರಿಗಳಾಗಿದ್ರೂ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇಬ್ಬರು ಒಟ್ಟಿಗೆ ಪ್ರಚಾರ ಮಾಡಿದ್ದೆವು. ನಾಲ್ಕು ಬಾರಿ ನಮ್ಮ ಕ್ಷೇತ್ರದ ಶಾಸಕರಾಗಿದ್ದರಿಂದ ಅವರಿಗೆ ಗೌರವ ಕೊಡಬೇಕಾಗಿರೋದು ನನ್ನ ಕರ್ತವ್ಯ. ಹಾಗಾಗಿ ಅವರನ್ನು ಮಾತನಾಡಿಸಿದೆ ಎಂದರು. ನಾನು ಜೆಡಿಎಸ್ ಬಿಡಲ್ಲ, ನನ್ನ ಹೆಸರಿಗೆ ಡ್ಯಾಮೇಜ್ ಮಾಡೋಕೆ ಈ ರೀತಿ ಮಾಡ್ತಿದ್ದಾರೆ ಎಂದು ಹೇಳಿದರು.