ಕರ್ನಾಟಕ

karnataka

ETV Bharat / state

ಕೊರೊನಾ‌ದಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ: ಕೆ.ಗೋಪಾಲಯ್ಯ - Minster K. Gopalya news

ಕೊರೊನಾ ಸಮಯದಲ್ಲಿ ನಾನು ಚಾಮರಾಜನಗರದಿಂದ ಬಂದ ಕುಟುಂಬಗಳು ಹಾಗೂ ಸುತ್ತಮುತ್ತ ಇರುವವರಿಗೆ ಎರಡು-ಮೂರು ದಿನ ಅಕ್ಕಿ ನೀಡಿದ್ದೇನೆ. ಸಂಕಷ್ಟದಲ್ಲಿದ್ದ ಜನರಿಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ. ಗೋಪಾಲಯ್ಯ
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ. ಗೋಪಾಲಯ್ಯ

By

Published : Jan 5, 2021, 4:48 PM IST

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಬೆಂಗಳೂರು ವತಿಯಿಂದ ಇಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಸಮ್ಮೇಳನ ಹಾಗೂ ಕ್ಯಾಲೆಂಡರ್ ಬಿಡುಗಡೆ ಮತ್ತು ಸಮ್ಮೇಳನದ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ

ಈ ವೇಳೆ‌ ಮಾತನಾಡಿದ‌ ಸಚಿವ ಗೋಪಾಲಯ್ಯ, ಈ ಬಾರಿಯ ಹೊಸ ವರ್ಷ ಎಲ್ಲರಿಗೂ ಸುಖ‌ ಶಾಂತಿ ನೆಮ್ಮದಿ‌ ತರಲಿ. ಕೊರೊನಾದಿಂದ ಸಂಕಷ್ಟಕ್ಕೆ‌ ಒಳಗಾದ ಜನರು‌ ಚೇತರಿಸಿಕೊಳ್ಳಲಿ. ಇದಕ್ಕೆ ಬೇಕಾದ ಸಹಾಯ ನಾನು ಮಾಡಲು‌ ಸಿದ್ಧ. ಕೊರೊನಾ ಸಮಯದಲ್ಲಿ ನಾನು ಚಾಮರಾಜನಗರದಿಂದ ಬಂದ ಕುಟುಂಬಗಳು ಹಾಗೂ ಸುತ್ತಮುತ್ತ ಇರುವವರಿಗೆ ಎರಡು-ಮೂರು ದಿನ ಅಕ್ಕಿ ನೀಡಿದ್ದೇನೆ. ಸಂಕಷ್ಟದಲ್ಲಿದ್ದ ಜನರಿಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು.

ಓದಿ:'ಕುಮಾರಸ್ವಾಮಿ ವಿಚಾರದಲ್ಲಿ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿದ್ದೇನೆ'

ಈ ಕಾರ್ಯಕ್ರಮವನ್ನು ರಾಜ್ಯದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಿದರು.

ABOUT THE AUTHOR

...view details