ಕರ್ನಾಟಕ

karnataka

ETV Bharat / state

ಸಂಸತ್ತಿನ ಅಧ್ಯಕ್ಷರ ಜಂಟಿ ಭಾಷಣಕ್ಕೆ ಹಾಜರಾಗುವುದಿಲ್ಲ ಎಂದ ಹೆಚ್​ಡಿಡಿ

ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ನಾನು ಇಂದು ಸಂಸತ್ತಿನ ಅಧ್ಯಕ್ಷರ ಜಂಟಿ ಭಾಷಣಕ್ಕೆ ಹಾಜರಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ
ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ

By

Published : Jan 29, 2021, 10:43 AM IST

Updated : Jan 29, 2021, 10:54 AM IST

ಬೆಂಗಳೂರು : ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣಕ್ಕೆ ಹಾಜರಾಗದಿರಲು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ನಿರ್ಧರಿಸಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ನನ್ನ ರೈತ ಸಹೋದರರು ಇಷ್ಟು ದಿನ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಬೆಂಬಲ ಸೂಚಿಸಿ ನಾನು ಇಂದು ಸಂಸತ್ತಿನ ಅಧ್ಯಕ್ಷರ ಜಂಟಿ ಭಾಷಣಕ್ಕೆ ಹಾಜರಾಗುವುದಿಲ್ಲ. ಈ ಕುರಿತು ನನ್ನ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ, ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ದೇವೇಗೌಡರು ಹೇಳಿದ್ದಾರೆ.

ಓದಿ:ರಾಷ್ಟ್ರಪತಿ ಭಾಷಣಕ್ಕೆ ಬಹಿಷ್ಕಾರ ಹಾಕಲಿವೆಯಾ ಪ್ರತಿಪಕ್ಷಗಳು?

ಸಂಸತ್ತಿನ ಬಜೆಟ್‌ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಮಾಡಲಿರುವ ಭಾಷಣವನ್ನು ಬಹಿಷ್ಕರಿಸಲು ಕಾಂಗ್ರೆಸ್‌, ಎನ್‌ಸಿಪಿ, ಶಿವಸೇನಾ, ಟಿಎಂಸಿ, ಬಿಎಸ್‌ಪಿ ಸೇರಿ 16 ವಿರೋಧ ಪಕ್ಷಗಳು ನಿರ್ಧರಿಸಿವೆ. ಭಾಷಣವನ್ನು ಬಹಿಷ್ಕರಿಸುವುದಾಗಿ ಆಮ್‌ ಅದ್ಮಿ ಪಕ್ಷವು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

Last Updated : Jan 29, 2021, 10:54 AM IST

ABOUT THE AUTHOR

...view details