ಬೆಂಗಳೂರು:ಶಾಸಕನಾಗಿ ನಾನು ಬಿಜೆಪಿಯಲ್ಲಿ ಹಿರಿಯನಾಗಿದ್ದೇನೆ. 9 ಬಾರಿ ಚುನಾವಣೆಯಲ್ಲಿ ನಿಂತು ನಾಲ್ಕನೇ ಬಾರಿ ತೀರ್ಥಹಳ್ಳಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಪಕ್ಷದ ಹಿರಿಯರು ಮೆಚ್ಚುವಂತಹ ಕೆಲಸ ಮಾಡಿದ್ದೇನೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಆರಗ ಜ್ಞಾನೇಂದ್ರ ಹೇಳಿದರು.
ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಸಚಿವ ಸ್ಥಾನಕ್ಕಾಗಿ ನಾನು ಒತ್ತಡ, ತಂತ್ರ, ಲಾಬಿ ಮಾಡಿಲ್ಲ. ನಾನು ಶ್ರಮ ಪಟ್ಟು ಬಿಎಸ್ವೈ ಜೊತೆ ಪಕ್ಷ ಕಟ್ಟಿದ್ದೇನೆ. ಹಾಗಾಗಿ ಪಕ್ಷದ ಹಿರಿಯ ನಾಯಕರಿಗೆ ಅಧಿಕಾರಕ್ಕಾಗಿ ಒತ್ತಡ ಹಾಕಿಲ್ಲ. ಈಗಲೂ ಒತ್ತಡ ಹೇರಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನ ಸಿಗುವ ಭರವಸೆ ಇದೆ :