ಕರ್ನಾಟಕ

karnataka

ETV Bharat / state

ನಾನೂ ಯಾರಿಗೂ ಹೆದರುವ ಗಂಡಲ್ಲ.. ಯತ್ನಾಳ್​ಗೆ ಎಂ ಪಿ ರೇಣುಕಾಚಾರ್ಯ ತಿರುಗೇಟು - MLA Yatnal

ಬಸನಗೌಡ ಪಾಟೀಲ್ ಯತ್ನಾಳ್ ಮಂತ್ರಿ ಆಗಲಿಲ್ಲ ಎನ್ನುವ ಕಾರಣಕ್ಕೆ ಭ್ರಮನಿರಸನಗೊಂಡು ಹೀಗೆಲ್ಲಾ ಮಾತಾಡಬಹುದು‌. ಯಾರೇ ಪಕ್ಷದ ವಿರುದ್ಧ ಟೀಕೆ ಮಾಡಿದ್ರೂ ಹೊನ್ನಾಳಿ ಹೊಡೆತದ ರುಚಿ ತೋರಿಸುತ್ತೇನೆ. ನನಗೆ ಯಾರ ಮೇಲೂ ಕೋಪ‌ ಇಲ್ಲ. ನನಗೆ ಮಂತ್ರಿ ಆಗಬೇಕೆಂಬ ಆಸೆ ಇಲ್ಲ. ನಾನು ನಾಲ್ಕು ಗೋಡೆ ಮಧ್ಯೆ ಮಾತನಾಡುತ್ತೇನೆ..

dsd
ಯತ್ನಾಳ್​ಗೆ ರೇಣುಕಾಚಾರ್ಯ ತಿರುಗೇಟು

By

Published : Jan 6, 2021, 7:32 PM IST

ಬೆಂಗಳೂರು : ನಾನೂ ಕೂಡ ಮಧ್ಯ ಕರ್ನಾಟಕದಿಂದ ಬಂದವನು. ಹೊನ್ನಾಳಿಯ ಹೊಡೆತದ ಬಗ್ಗೆ ಜಗತ್ತಿಗೆ ಗೊತ್ತಿದೆ. ನಾನೂ ಕೂಡ ಯಾರಿಗೂ ಹೆದರುವ ಗಂಡಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಪರೋಕ್ಷವಾಗಿ ಶಾಸಕ ಯತ್ನಾಳ್​ ಅವರಿಗೆ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮತ್ತು ಪಕ್ಷ ನನಗೆ ತಾಯಿ-ತಂದೆ ಇದ್ದಂತೆ. ನಾನು ಹಾದಿ ಬೀದಿಯಿಂದ ಬಂದವನಲ್ಲ. ಹಾದಿ ಬೀದಿಯಲ್ಲಿ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದವನು. ನಾನು ಹಾದಿ ಬೀದಿಯಲ್ಲಿ ಮಾತಾಡಲ್ಲ.

ಯತ್ನಾಳ್​ಗೆ ರೇಣುಕಾಚಾರ್ಯ ತಿರುಗೇಟು

ನನಗೆ ಯಾರ ಮೇಲೂ ಕೋಪ‌ ಇಲ್ಲ. ನನಗೆ ಮಂತ್ರಿ ಆಗಬೇಕೆಂಬ ಆಸೆ ಇಲ್ಲ. ನಾನು ನಾಲ್ಕು ಗೋಡೆ ಮಧ್ಯೆ ಮಾತನಾಡುತ್ತೇನೆ. ಶಾಸಕರ ಸಭೆಯಲ್ಲಿ ಮಾತನಾಡಿದ್ದೇನೆ. ಬಹಿರಂಗವಾಗಿ ಹೇಳಿಕೆ ನೀಡಲ್ಲ. ನನ್ನ ವೈಯಕ್ತಿಕ ವರ್ಚಸ್ಸು ಕಡಿಮೆ ಮಾಡಿಕೊಳ್ಳಲ್ಲ.

ಸಿಎಂ ಯಡಿಯೂರಪ್ಪ ನಮ್ಮ ಶಾಸಕಾಂಗ ಪಕ್ಷದ ನಾಯಕ. ನಾನು ಯಡಿಯೂರಪ್ಪನವರ ಪರವಾಗಿ ಮಾತನಾಡಲ್ಲ. ನಾನು ಪಕ್ಷದ ಪರ ಮಾತನಾಡುತ್ತೇನೆ. ಹೊನ್ನಾಳಿ ಹೊಡೆತ ರಾಜ್ಯಕ್ಕೆ ಫೇಮಸ್. ಹೊನ್ನಾಳಿ, ನ್ಯಾಮತಿಯಲ್ಲಿ ಕುಸ್ತಿ ಪಂದ್ಯ ನಡೆಯುತ್ತದೆ.

ರಾಷ್ಟ್ರಮಟ್ಟದ ಕುಸ್ತಿಪಟುಗಳು ಭಾಗವಹಿಸುತ್ತಾರೆ. ನಮ್ಮ ಪಕ್ಷದ ವಿರುದ್ಧ ಹೊನ್ನಾಳಿ ಹೊಡೆತ ತೋರಿಸಲ್ಲ. ಪ್ರತಿಪಕ್ಷಗಳ ವಿರುದ್ಧ ಹೊನ್ನಾಳಿ ಹೊಡೆತ ತೋರಿಸುತ್ತೇನೆ ಎಂದು ಗುಡುಗಿದ್ದಾರೆ.

ABOUT THE AUTHOR

...view details