ಕರ್ನಾಟಕ

karnataka

ETV Bharat / state

ಗಂಡನ ಅನೈತಿಕ ಸಂಬಂಧ: ಪತಿ ಮುಖಕ್ಕೆ ಬಿಸಿ ಎಣ್ಣೆ ಎರಚಿದ ಪತ್ನಿ - husband's immoral relationship in yashwanthpur

ಪತಿಯ ಅನೈತಿಕ ಸಂಬಂಧಕ್ಕೆ ರೋಸಿ ಹೋದ ಪತ್ನಿ ಗಂಡನ ಮುಖಕ್ಕೆ ಕುದಿಯುವ ಎಣ್ಣೆ ಎರಚಿದ ಘಟನೆ ಯಶವಂತಪುರ ಮೋಹನ್​ ಕುಮಾರ್​ ನಗರದಲ್ಲಿ ನಡೆದಿದೆ.

Wife casting hot oil on him face
ಮುಖಕ್ಕೆ ಬಿಸಿ ಎಣ್ಣೆ ಎರಚಿದ ಪತ್ನಿ

By

Published : Feb 9, 2020, 11:34 PM IST

ಬೆಂಗಳೂರು:ಪತಿಯ ಅನೈತಿಕ ಸಂಬಂಧಕ್ಕೆ ರೋಸಿ ಹೋದ ಪತ್ನಿ, ಗಂಡನ ಮುಖಕ್ಕೆ ಕುದಿಯುವ ಎಣ್ಣೆ ಎರಚಿದ ಘಟನೆ ಯಶವಂತಪುರ ಮೋಹನ್​ ಕುಮಾರ್​ ನಗರದಲ್ಲಿ ನಡೆದಿದೆ.

ಗಾಯಗೊಂಡ ಮಂಜುನಾಥ್
ಇಲ್ಲಿನ ಮೋಹನ್ ಕುಮಾರ್ ನಗರದ ಮಂಜುನಾಥ್ ಹಾಗೂ ಪದ್ಮಾ ದಂಪತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಮದುವೆಯಾಗಿ 9 ವರ್ಷ ಕಳೆದಿದ್ದು, ಈ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳಿದ್ದಾರೆ.

ಅನೈತಿಕ ಸಂಬಂಧದ ಬಗ್ಗೆ ಹಲವು ಪದ್ಮಾ ಬುದ್ದಿ ಹೇಳಿದರೂ ತಲೆ ಕೆಡಿಸಿಕೊಳ್ಳದ ಪತಿ ತನ್ನ ಚಾಳಿಯನ್ನು ಮುಂದುವರೆಸಿದ್ದಾನೆ.

ಇಂದು (ಫೆ.9) ಬೆಳಿಗ್ಗೆ ಇದೇ ವಿಚಾರಕ್ಕಾಗಿ ಗಲಾಟೆ ಶುರುವಾಗಿದೆ. ಪತ್ನಿ ಪದ್ಮಾ ಕುದಿಯುತ್ತಿದ್ದ ಅಡುಗೆ ಎಣ್ಣೆಯನ್ನು‌ ಗಂಡನ ಮುಖ ಹಾಗೂ ದೇಹದ ಮೇಲೆ ಎರಚಿದ್ದಾಳೆ. ತಕ್ಷಣವೇ ಕಿರುಚಾಡುತ್ತ ಹೊರಬಂದಿದ್ದು, ನೆರೆ-ಹೊರೆಯವರು ಮಂಜುನಾಥ್​ನನ್ನು ಹತ್ತಿರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ABOUT THE AUTHOR

...view details