ಬೆಂಗಳೂರು: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯ ಹಾಗೂ ಪರ ಪುರುಷನೊಂದಿಗೆ ಮಲಗುವಂತೆ ಹಿಂಸೆ ನೀಡಿದ ಆರೋಪದಡಿ ಗಂಡನ ವಿರುದ್ಧ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅರಕೆರೆ ನಿವಾಸಿಯಾಗಿರುವ 28 ವರ್ಷದ ವ್ಯಕ್ತಿಯ ವಿರುದ್ಧ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ವರದಕ್ಷಿಣೆಗೆ ಒತ್ತಾಯ ಮಾಡುತ್ತಿರುವುದಾಗಿ ಪತ್ನಿ ಆರೋಪಿಸಿದ್ದು, ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ಹಣದಲ್ಲಿ ಮೋಜು-ಮಸ್ತಿ ಮಾಡ್ತಿದ್ದ ಎಡ್ರಿಲ್, ಆಕೆಯ ದುಡ್ಡಿನಲ್ಲಿ ಪರ ಸ್ತ್ರೀಯರಿಗೆ ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದನಂತೆ. ಅಚಾನಕ್ ಆಗಿ ಗಂಡನ ಮೊಬೈಲ್ನಲ್ಲಿದ್ದ ಆಶ್ಲೀಲ ಫೋಟೊ- ವಿಡಿಯೋ ನೋಡಿದ ಪತ್ನಿ ದಂಗಾಗಿದ್ದಾಳೆ. ಹಲವರೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಪತಿ ಎಡ್ರಿಲ್, ಆ ವೇಳೆ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದನಂತೆ.