ಬೆಂಗಳೂರು: ಪತಿ ನೋಡುತ್ತಿರುವ ಪೋರ್ನ್ ವಿಡಿಯೋದಲ್ಲಿ ಸ್ವಂತ ಹೆಂಡತಿಯೇ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ.
ಮೂಲತಃ ಉತ್ತರ ಭಾರತ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಕಲ್ಕತ್ತಾ ಮೂಲದ ವೈದ್ಯೆಯನ್ನು ಮ್ಯಾಟ್ರಿಮೋನಿಯಲ್ನಲ್ಲಿ ಪರಿಚಯ ಮಾಡಿಕೊಂಡಿದ್ದ. ಎರಡು ವರ್ಷಗಳ ಕಾಲ ಇಬ್ಬರು ಪರಸ್ಪರ ಪ್ರೀತಿಸಿ, 2018ರಲ್ಲಿ ಮದುವೆಯಾಗಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿ ಸಿಟಿಯಲ್ಲಿ ವಾಸವಾಗಿದ್ದರು. ಆದರೆ ಪತಿಗೆ ಪೋರ್ನ್ ವಿಡಿಯೋ ನೋಡುವ ಹುಚ್ಚು ಹವ್ಯಾಸವಿತ್ತು. ಪ್ರತಿದಿನ ಪೋರ್ನ್ ವಿಡಿಯೋ ನೋಡಿ ಎಂಜಾಯ್ ಮಾಡ್ತಿದ್ದ. ಆದರೆ ಅದೊಂದು ದಿನ ಪೋರ್ನ್ ವಿಡಿಯೋ ನೋಡುವಾಗ ಟೆಕ್ಕಿ ದಂಗಾಗಿದ್ದಾನೆ.
ಪೋರ್ನ್ ನೋಡ್ತಿದ್ದ ಪತಿ, ಸಲ್ಲಾಪದಲ್ಲಿ ಸಿಕ್ಕಿಬಿದ್ದ ಪತ್ನಿ ಆ ಪೋರ್ನ್ ವಿಡಿಯೋದಲ್ಲಿದ್ದು ತನ್ನ ಪತ್ನಿಯೇ. ಪರ ಪುರುಷನ ಜೊತೆ ಹೆಂಡತಿಯ ಸರಸ ಕಂಡ ಗಂಡ, ಪತ್ನಿಗೆ ಆ ವಿಡಿಯೋ ತೋರಿಸಿ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಹಳೆ ಬಾಯ್ಫ್ರೆಂಡ್ ಜೊತೆಗಿನ ಕಹಾನಿಯನ್ನು ಪತಿಯ ಮುಂದೆ ಬಿಚ್ಚಿಟ್ಟಿದ್ದಾಳೆ. ಆದರೆ ಅದೇನೋ ಇಬ್ಬರ ನಡುವೆ ಮಾತುಕತೆಯಾಗಿ ಬಳಿಕ ಮೌನಕ್ಕೆ ಶರಣಾಗಿದ್ದಾಳೆ.
ಆದರೆ ಇದೇ ಜನವರಿಯಲ್ಲಿ ಮತ್ತೆ ಪೋರ್ನ್ ವಿಡಿಯೋ ವೀಕ್ಷಣೆ ಮಾಡುತ್ತಿರುವಾಗ ಮತ್ತೆ ಪತ್ನಿಯ ಸಲ್ಲಾಪ ಕಂಡ ಪತಿ, ಹೆಂಡತಿಯಿಂದ ದೂರವಾಗಿದ್ದಾನೆ. ಹೀಗಾಗಿ ಮಹಿಳೆ ನಗರ ಆಯುಕ್ತರ ಕಚೇರಿಯಲ್ಲಿನ ವನಿತಾ ಸಹಾಯವಾಣಿ ಮೆಟ್ಟಿಲೇರಿದ್ದು, ಪತಿಯನ್ನ ತನ್ನ ಜೊತೆ ಮಾತುಕತೆ ನಡೆಸಿ ಸರಿ ಮಾಡುವಂತೆ ಮನವಿ ಮಾಡಿದ್ದಾಳೆ.
ಇನ್ನು ವನಿತಾ ಸಹಾಯವಾಣಿಯವರು ಇಬ್ಬರಿಗೂ ಕೌನ್ಸಿಲಿಂಗ್ ನಡೆಸುತ್ತಿದ್ದಾರೆ.