ಕರ್ನಾಟಕ

karnataka

ETV Bharat / state

ಮತ್ತೊಬ್ಬನೊಂದಿಗೆ ಪತ್ನಿಯ ನಗ್ನ ಚಿತ್ರ ಕಂಡ ಯುವಕ... ಮೊದಲ ರಾತ್ರಿಗೂ ಮುನ್ನವೇ ಮುರಿದು ಬಿತ್ತು ಸಂಬಂಧ! - ರಾಸಲಿಲೆಯನ್ನು ಗಂಡ‌ ಮೊಬೈಲ್ ನಲ್ಲಿ ನೋಡಿ ಶಾಕ್​​

ಮತ್ತೊಬ್ಬನೊಂದಿಗಿದ್ದ ತನ್ನ ಹೆಂಡತಿಯ ನಗ್ನ ಫೋಟೋಗಳನ್ನು ನೋಡಿದ ಪತಿವೋರ್ವ ಮೊದಲ ರಾತ್ರಿಗೆ ಎರಡು ದಿನ ಬಾಕಿ ಇರುವಾಗಲೇ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ವಿಚಿತ್ರ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.

ಗಂಡ ಶಾಕ್
ಗಂಡ ಶಾಕ್

By

Published : Mar 16, 2020, 12:09 PM IST

ಬೆಂಗಳೂರು:ಮೊದಲ ರಾತ್ರಿಗೆ ಎರಡು ದಿನ ಬಾಕಿ ಇರುವಾಗಲೇ ಪತ್ನಿಯ ರಾಸಲೀಲೆಯ ಫೋಟೋಗಳನ್ನು ಮೊಬೈಲ್​ನಲ್ಲಿ ನೋಡಿದ ಪತಿಗೆ ಶಾಕ್​​ ಆಗಿದೆ. ನವ ದಾಂಪತ್ಯ ಜೀವನಕ್ಕೆ ಆರಂಭದಲ್ಲೇ ಪೂರ್ಣ ವಿರಾಮ ಬಿದ್ದಿರುವ ಪ್ರಕರಣ ಸುಬ್ರಮಣ್ಯ ನಗರದಲ್ಲಿ ಬೆಳಕಿಗೆ ಬಂದಿದೆ.

ಸುಬ್ರಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಸಂತ್ರಸ್ತ ಯುವಕ ವಾಸವಿದ್ದು ಹಾಸನ ಮೂಲದ ಸರ್ಕಾರಿ ಉದ್ಯೋಗದಲ್ಲಿರುವ ಯುವತಿಯ ಪ್ರಪೋಸಲ್ ಬಂದ ಕಾರಣ ಎರಡು ಮನೆಯವರ ಒಪ್ಪಿಗೆ ಮೇರೆಗೆ 2019 ಜೂನ್ 30ರಂದು ಹಿರಿಯರ ಮುಂದೆ ಪರಸ್ಪರ ಒಪ್ಪಿಗೆ ಮದುವೆಯಾಗಿದ್ದ. ನಂತರ ಕೆಲ ಸಾಂಪ್ರದಾಯಿಕ ಪೂಜೆ, ಪುನಸ್ಕಾರ ಇದ್ದ ಕಾರಣ, ಕೆಲಕಾಲ ಬಿಡುವಿನಲ್ಲಿದ್ದ ಸಂತ್ರಸ್ತ ಹುಡುಗನಿಗೆ ಫೇಸ್​ಬುಕ್​ನಲ್ಲಿ ಪ್ರಮೋದ್ ಕುಮಾರ್ ಎಂಬ ಹೆಸರಿನ ಅಕೌಂಟ್​​ನಿಂದ ಮೆಸ್ಸೇಜ್​ ಬಂದಿತ್ತು. ಹೊಸದಾಗಿ ಮದುವೆ ಆಗಿದ್ದ ಹುಡುಗಿ ಇದಕ್ಕೂ ಮುನ್ನ ವಿನೀತ್ ಎಂಬಾತನನ್ನು ಪ್ರೀತಿಸಿ ಮೋಸ ಮಾಡಿರುವುದಾಗಿ ತಿಳಿಸಿದ್ದಾನೆ. ಹಾಗೆ ಆಕೆಯ ನಗ್ನ ಫೋಟೋಗಳನ್ನು ಕಳುಹಿಸಿ ಹೆಚ್ಚಿನ ಮಾಹಿತಿಗೆ ವಿನೀತ್ ನಂಬರ್ ಶೇರ್ ಮಾಡಿದ್ದ.

ಇನ್ನು ವಿನಿತ್​ನನ್ನು ಮಧುಮಗ ಸಂಪರ್ಕಿಸಿದಾಗ ಆಕೆಯೊಂದಿಗಿನ ದೈಹಿಕ ಸಂಪರ್ಕದ ಫೋಟೋಗಳನ್ನು ಕಳುಹಿಸಿದ್ದಾನೆ. ಚಿಕ್ಕಮಗಳೂರು ರೆಸಾರ್ಟ್​ನಲ್ಲಿ ತಾವಿಬ್ಬರು ಇದ್ದ ಫೋಟೋಗಳನ್ನು ಶೇರ್ ಮಾಡಿದ್ದಾನೆ. ಇದಲ್ಲದೇ ಹುಡುಗಿ ಚಾಟ್ ಮಾಡಿರುವ ಸಂದೇಶವನ್ನ ಕಳುಹಿಸಿದ್ದಾನೆ. ಇದೆಲ್ಲವನ್ನು ಕಂಡ ಯುವಕನಿಗೆ ಮೊದಲ ರಾತ್ರಿಗೆ ಎರಡು ದಿನ ಬಾಕಿ ಇದ್ದಾಗಲೇ ದೊಡ್ಡ ಆಘಾತವಾಗಿದೆ.

ಇನ್ನು ಮದುವೆಯ ಮುಂಚೆ ಯಾರನ್ನಾದರು ಪ್ರೀತಿ ಮಾಡುತ್ತಿದ್ದೀಯ ಅನ್ನೋ ಪ್ರಶ್ನೆಗೆ ನೋ ಎಂದು ಹೇಳಿ ಯುವತಿ ಮೋಸ ಮಾಡಿದ್ದಾಳೆ ಎನ್ನಲಾಗ್ತಿದೆ. ಸದ್ಯ ಈ ಘಟನೆ ಗೊತ್ತಾದ ನಂತರ ಸಂತ್ರಸ್ತ ಯುವಕ ಪ್ರಶ್ನಿಸಿದ್ದಕ್ಕೆ ಯುವತಿ ಮನೆಯವರು ಬೆದರಿಕೆ ಹಾಕಿದ ಕಾರಣ ಸದ್ಯ ಈ ಸಂಬಂಧ ಹಾಸನದ ಸೈಬರ್ ಠಾಣೆ ಹಾಗೂ ಸಿಲಿಕಾನ್ ಸಿಟಿಯ ಸುಬ್ರಮಣ್ಯ ನಗರ ಠಾಣೆಯಲ್ಲಿ ದೂರು ಪ್ರತಿ ದೂರುಗಳು ದಾಖಲಾಗಿವೆ.

ABOUT THE AUTHOR

...view details