ಕರ್ನಾಟಕ

karnataka

ETV Bharat / state

ಕುಡಿತ ಕಾರಣಕ್ಕೆ ದಂಪತಿ ನಡುವೆ ಜಗಳ : ಪತ್ನಿ ಕೊಲೆಯಲ್ಲಿ ಅಂತ್ಯ - Anekallu crime latest news

ಕುಡಿದು ಬಂದು ರಂಪಾಟ ಮಾಡುತ್ತಿದ್ದ ಪ್ರಶ್ನಿಸಿದ್ದಕ್ಕೆ ಪತಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ.

Accused
Accused

By

Published : Oct 26, 2020, 2:11 PM IST

ಆನೇಕಲ್ :ಕುಡಿದು ಬಂದು ರಂಪಾಟ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಪತಿ ಕೊಲೆಗೈದಿರುವ ಘಟನೆ ಬನ್ನೇರುಘಟ್ಟ ಬಳಿಯ ಬನ್ನಹಳ್ಳಿಯಲ್ಲಿ ನಡೆದಿದೆ.

ಗೌರಮ್ಮ ಕೊಲೆಯಾದ ಮಹಿಳೆ. ಕೃತ್ಯವೆಸಗಿದ ಆರೋಪಿ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.ಈತ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಪ್ರತಿದಿನ ಕುಡಿದು ಬಂದು ಖ್ಯಾತೆ ತೆಗೆಯುತ್ತಿದ್ದನಂತೆ.

ನಿನ್ನೆ ಕೂಡ ಇದೇ ರೀತಿ ಕುಡಿದ ಬಂದ ಗಂಡನನ್ನು ಗೌರಮ್ಮ ಪ್ರಶ್ನಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಜಗಳ ಜೋರಾಗಿ, ಆರೋಪಿ ಕುಮಾರ್ ಪತ್ನಿಯ ಎದೆಗೆ ಒದ್ದಿದ್ದಾನೆ. ಇದರಿಂದ ಗೌರಮ್ಮ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details