ಕರ್ನಾಟಕ

karnataka

ETV Bharat / state

ಶೀಲ ಶಂಕಿಸಿ ಹೆಂಡತಿ ಕೊಂದ ಪತಿ - ಆನೇಕಲ್​ನಲ್ಲಿ ಹೆಂಡತಿಯನ್ನು ಕೊಂದ ಪ್ರಕರಣ

ಸಂಶಯಪಟ್ಟು ಹೆಂಡತಿಯನ್ನೇ ಪತಿ ಕೊಲೆಗೈದಿದ್ದಾನೆ.

Etv Bharat
Etv Bharat

By

Published : Jul 16, 2022, 3:07 PM IST

ಆನೇಕಲ್:ವ್ಯಕ್ತಿಯೊಬ್ಬ ಅನೈತಿಕ ಸಂಬಂಧ ಬಗ್ಗೆ ಶಂಕಿಸಿ ಹೆಂಡತಿಯನ್ನ ಮಚ್ಚಿನಿಂದ ಕೊಲೆಗೈದ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಮಾಲೂರು ಕೆಂಬತ್ತನಹಳ್ಳಿ ಮೂಲದ 23 ವರ್ಷದ ಮಹಿಳೆ ಕೊಲೆಯಾದವರು. ಗಂಡ ವೆಂಕಟೇಶಾಚಾರಿ ಕೊಲೆ ಮಾಡಿದ ಆರೋಪಿ. ಕಳೆದ ಎರೆಡು ವರ್ಷಗಳ ಹಿಂದೆ ಆನೇಕಲ್ ಪಟ್ಟಣದ ಹೂವಾಡಿಗರ ಬೀದಿಯ ಗೋವಿಂದರಾಜು ಮನೆಯಲ್ಲಿ ದಂಪತಿಗಳು ಬಾಡಿಗೆಗಿದ್ದರು.

ಇತ್ತೀಚೆಗೆ ಗಂಡ, ಹೆಂಡತಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಹೆಂಡತಿ ಮೇಲೆ ಗಂಡ ಸಂಶಯಪಟ್ಟು ಆಗಾಗ ಜಗಳ ಮಾಡುತ್ತಿದ್ದನಂತೆ. ಇನ್ನು ಶನಿವಾರ ಬೆಳಿಗ್ಗೆ ಇದೇ ವಿಚಾರವಾಗಿ ಇಬ್ಬರ ನಡುವೆ ಮತ್ತೇ ಜಗಳ ಆರಂಭವಾಗಿ ತಾರಕಕ್ಕೇರಿತ್ತು. ಆಗ ರಮೇಶ್ ಮಚ್ಚಿನಿಂದ ತನ್ನ ಹೆಂಡ್ತಿಗೆ ಹೊಡೆದಿದ್ದಾನೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಮುದ್ದಾದ ಮಗನನ್ನು ಕೊಂದು, ಗೋಣಿ ಚೀಲದಲ್ಲಿ ತುಂಬಿ, ಕೆರೆಗೆ ಎಸೆದ ತಾಯಿ!

ABOUT THE AUTHOR

...view details