ಕರ್ನಾಟಕ

karnataka

ETV Bharat / state

ಹೆಂಡ್ತಿ ಇದ್ರೂ ಮತ್ತೊಬ್ಬಳ ಜೊತೆ ಲವ್ವಿಡವ್ವಿ... ಪ್ರಶ್ನಿಸಿದ ಪತ್ನಿ ಕೊಂದು ಪತಿ ಆತ್ಮಹತ್ಯೆ - ಬೆಂಗಳೂರು ಲವ್ವಿ-ಡವ್ವಿ ಸುದ್ದಿ

ತನ್ನ ಅಕ್ರಮ ಸಂಬಂಧ ಬಯಲಾಗಿದ್ದರಿಂದ ಕೌಟುಂಬಿಕ ಕಲಹ ಉಂಟಾಗಿ ಪತಿ-ಪತ್ನಿ ದುರಂತ ಅಂತ್ಯ ಕಂಡಿರುವ ಪ್ರಕರಣ ಬೆಂಗಳೂರಲ್ಲಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಗಂಡನೇ ಹೆಂಡತಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

husband killed wife and commit suicide
ಪತ್ನಿ ಕೊಂದು ಪತಿ ಆತ್ಮಹತ್ಯೆ

By

Published : May 16, 2020, 5:56 PM IST

ಬೆಂಗಳೂರು:ಅಕ್ರಮ ಸಂಬಂಧ ತಂದ ಜಗಳದಿಂದ ಬಿಹಾರ ಮೂಲದ ದಂಪತಿ ದುರಂತ ಅಂತ್ಯ ಕಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಗಂಡನ ಅಕ್ರಮ ಸಂಬಂಧ ಬಯಲಾಗಿದ್ದರಿಂದ ಕೌಟುಂಬಿಕ ಕಲಹ ಉಂಟಾಗಿತ್ತು. ಮನೆಯಲ್ಲಿ ನಡೆದ ಗಲಾಟೆಯಿಂದ ಹೆಂಡತಿ‌ಯ್ನನು ಕೊಲೆ ಮಾಡಿದ ಪತಿ ಮಹಡಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಕೂಡ್ಲು ಗೇಟ್ ಎಎಫ್​ಸಿಎಲ್​​ ಬಡಾವಣೆಯಲ್ಲಿ ಈ ಪ್ರಕರಣ ನಡೆದಿದೆ.

ಖಾಸಗಿ ಕಾರ್ಖಾನೆಯ ಮ್ಯಾನೇಜರ್​ ಆಗಿದ್ದ ಮನೀಷ್ ಕುಮಾರ್ ಸಂಧ್ಯಾ ಎಂಬಾಕೆಯನ್ನು ಮದುವೆಯಾಗಿದ್ದ. ಎರಡು ವರ್ಷದ ಹಿಂದೆ ಬಿಹಾರದಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬಂದು ಕೂಡ್ಲು ಗೇಟ್ ಮಹಡಿಯಲ್ಲಿ ಈ ದಂಪತಿ ವಾಸವಿದ್ದರು. ಈ ಮಧ್ಯೆ ಮನೀಷ್ ಕುಮಾರ್ ಗೆ ಹುಡುಗಿಯೊಬ್ಬಳ ಪರಿಚಯವಾಗಿ ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆದಿತ್ತು ಎನ್ನಲಾಗ್ತಿದೆ. ಈ ವಿಚಾರ ಹೆಂಡತಿಗೆ ಗೊತ್ತಾಗಿ ಮನೆಯಲ್ಲಿ ಜಗಳ ಶುರುವಾಗಿತ್ತು. 2 ದಿನದ ಹಿಂದೆ ಈ ಜಗಳ ತಾರಕಕ್ಕೇರಿದ್ದು ಸಂಧ್ಯಾಳ ಕುತ್ತಿಗೆ ಹಿಸುಕಿ ಕೊಲೆಮಾಡಿ ಹೆಣವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದ ಮನೀಷ್​, ಮನೆಯಲ್ಲಿಯೇ ಇದ್ದ.

ಕಳೆದೆರೆಡು ದಿನಗಳಿಂದ ಸಂಧ್ಯಾಳ ತವರುಮನೆಯಿಂದ ಎಷ್ಟೇ ಕರೆ ಮಾಡಿದರೂ ಆಕೆಯಿಂದ ಪ್ರತಿಕ್ರಿಯೆ ಬಾರದ್ದರಿಂದ ತವರು ಮನೆಯವರು ಸಹಜವಾಗಿ ಮನೆ ಹುಡುಕಿಕೊಂಡು ಬಂದಿದ್ದರು. ಅವರ ಆಗಮನದಿಂದ ವಿಚಲಿತನಾದ ಮನೀಷ್ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಪರಪ್ಪನ ಅಗ್ರಹಾರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details