ಅನೇಕಲ್ (ಬೆಂಗಳೂರು): ಆನೇಕಲ್ ತಾಲೂಕಿನ ಹಳೆ ಚಂದಾಪುರದ ಜಿಪಿಆರ್ ಬಡಾವಣೆಯ ದೇವಿಚಂದ್ ಬಿಲ್ಡಿಂಗ್ ಸೆಕ್ಯೂರಿಟಿ ರೂಮಿನಲ್ಲಿ ಹೆಂಡತಿಯನ್ನು ಕೊಲೆ ಮಾಡಿ ಗಂಡ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಏ. 23ರ ಮುಂಜಾನೆ ಹೆಂಡತಿ ನಿಶುಳನ್ನು ಮಕ್ಕಳ ಮುಂದೆಯೇ ಕೊಲೆ ಮಾಡಿ. ತನ್ನ ಅತ್ತೆಯ ಮನೆಯಲ್ಲಿ ಇಬ್ಬರು ಮಕ್ಕಳನ್ನು ಬಿಟ್ಟು ಪತಿ ಪರಾರಿಯಾಗಿದ್ದಾನೆ.
ಹೆಂಡತಿ ಕೊಂದು ಗಂಡ ಪರಾರಿ.. ಪೊಲೀಸರಿಂದ ತಲಾಶ್ - etv bharat kannada
ಎರಡನೇ ಹೆಂಡತಿಯನ್ನು ಕೊಲೆ ಮಾಡಿ ಗಂಡ ಪರಾರಿಯಾದ ಘಟನೆ ಆನೇಕಲ್ನಲ್ಲಿ ನಡೆದಿದೆ.
ನೇಪಾಳ ಮೂಲದ ಅಮರ್, ನಿಶುಳನ್ನ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ. ನೇಪಾಳ ಮೂಲದ ನಿಶು, ಕೂಡ್ಲು ಬಳಿಯ ನೆಂಟರ ಮನೆಗೆ ಆರು ತಿಂಗಳ ಹಿಂದೆ ಬಂದು ನೆಲೆಸಿದ್ದಳು. ಗುರು ಹಿರಿಯರ ಸಮ್ಮುಖದಲ್ಲಿ ಅಮರ್ ಜೊತೆ ನಿಶುಳ ಮದುವೆಯಾಗಿತ್ತು. ಆರೋಪಿ ಬಿಲ್ಡಿಂಗ್ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ. ಈ ಮುನ್ನ ಪುಷ್ಪ ಎಂಬ ಮೊದಲ ಹೆಂಡತಿಯಿದ್ದು ಅವರಿಗೆ ಇಬ್ಬರು ಮಕ್ಕಳಿದ್ದರು. ಆಕೆ ಅಮರ್ನ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ತಿಳಿದುಬಂದಿದೆ. ಇದೀಗ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗೆ ಶೋಧಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ:15 ವರ್ಷಗಳಿಂದ ಅಕ್ರಮ ಸಂಬಂಧ.. ಪದೇ ಪದೆ ಹಣ ಕೇಳಿದ್ದಕ್ಕೆ ಹೆಣ ಉರುಳಿಸಿದ.. ಇಬ್ಬರು ಆರೋಪಿಗಳ ಬಂಧನ