ಕರ್ನಾಟಕ

karnataka

ETV Bharat / state

ಚಾಕುವಿನಿಂದ ಪತ್ನಿಯನ್ನು ಮನಬಂದಂತೆ ಇರಿದು ಕೊಂದ ಪತಿರಾಯ.. ಹೊಸಕೋಟೆಯಲ್ಲಿ ದಾರುಣ - ಎಂವಿಜೆ‌ ಆಸ್ಪತ್ರೆ

ಪತಿಯೊಬ್ಬ ತನ್ನ ಪತ್ನಿಯನ್ನೇ ಚಾಕುವಿನಿಂದ ನಾಲ್ಕರಿಂದ ಐದು ಬಾರಿ ಇರಿದು ಕೊಲೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಸ್ವಪ್ನಾ ಹಾಗೂ ಆರೋಪಿ ಸುಧಾಕರ್
ಸ್ವಪ್ನಾ ಹಾಗೂ ಆರೋಪಿ ಸುಧಾಕರ್

By

Published : Nov 30, 2022, 7:28 PM IST

ಹೊಸಕೋಟೆ (ಬೆಂಗಳೂರು):ಚಾಕುವಿನಿಂದ ಪತ್ನಿಯನ್ನೇ ಮನಬಂದಂತೆ ಇರಿದು ಪತಿಯೊಬ್ಬ ಕೊಲೆ ಮಾಡಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಕಾವೇರಿ ನಗರದ ನಿವಾಸಿ ಸ್ವಪ್ನ (22) ಮೃತರು. ಅನುಮಾನದ ಭೂತ ಮತ್ತು ವರದಕ್ಷಿಣೆ ಕಿರುಕುಳದಿಂದ ಗಂಡ ಸುಧಾಕರ್​ನನ್ನು ಬಿಟ್ಟು ಕಳೆದ ಎರಡು ವರ್ಷಗಳಿಂದ ದೂರವಾಗಿದ್ದರು. ತವರು ಮನೆಗೆ ಬಂದು ಕೆಲಸಕ್ಕೆ ಹೋಗುತ್ತಾ ಜೀವನ ಸಾಗಿಸುತ್ತಿದ್ದರು.

ಆದರೆ, ಮಂಗಳವಾರ ಸಂಜೆ ಮನೆಗೆ ಬಂದವನೇ ಏಕಾಏಕಿ ಪತ್ನಿಯನ್ನು ‌ಚಾಕುವಿನಿಂದ ನಾಲ್ಕರಿಂದ ಐದು ಬಾರಿ ಕತ್ತು ಮತ್ತು ಬೆನ್ನಿಗೆ ಇರಿದು ಕೊಲೆ ಮಾಡಿ ಪರಾರಿ ಆಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಸುಧಾಕರ್​ನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಹೊಸಕೋಟೆ ಪೊಲೀಸರು ಸ್ಥಳಕ್ಕೆ‌ ಬಂದು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂವಿಜೆ‌ ಆಸ್ಪತ್ರೆಗೆ ರವಾನಿಸಿದ್ದಾರೆ.

ಓದಿ:ವಿವಾಹವಾಗಿ 16 ವರ್ಷ, ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ: ಗಂಡನ ಕೊಲೆ ಮಾಡಿ ಚರಂಡಿಗೆ ಶವ ಎಸೆದ ಹೆಂಡ್ತಿ

ABOUT THE AUTHOR

...view details