ಬೆಂಗಳೂರು:ವಿವಾಹದ ಬಳಿಕ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿ ಲಿಫ್ಟ್ನಲ್ಲೇ ತಲಾಕ್ ಹೇಳಿ ಮನೆಯಿಂದ ಹೊರದಬ್ಬಿರುವುದಾಗಿ ಆರೋಪಿಸಿದ ಮಹಿಳೆಯೊಬ್ಬರು ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ಮಹಮ್ಮದ್ ಅಕ್ರಂ ಎಂಬಾತನ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.
30 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆಯಾಗಿ ಪಡೆದು ವಿವಾಹವಾಗಿದ್ದ ಮಹಮ್ಮದ್ ಅಕ್ರಂ, ನಂತರ ಹಣಕ್ಕಾಗಿ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಧನದಾಹಿಯಾಗಿದ್ದ ಪತಿ ರಂಜಾನ್ ಹಬ್ಬಕ್ಕೆಂದು ತವರಿಗೆ ತೆರಳಿದ್ದಾಗ 10 ಲಕ್ಷ ರೂ. ಹಣ ತರುವಂತೆ ಹೇಳಿದ್ದನಂತೆ.