ETV Bharat Karnataka

ಕರ್ನಾಟಕ

karnataka

ETV Bharat / state

ಪಾರ್ಟಿಯಲ್ಲಿ ಫ್ರೆಂಡ್ಸ್​ ಜೊತೆ ಡ್ಯಾನ್ಸ್ ಮಾಡು ಅಂತಾ ಪತಿ ಒತ್ತಾಯ: ಬೇಸತ್ತು ಪತ್ನಿ ಆತ್ಮಹತ್ಯೆ - ಬೆಂಗಳೂರಿನಲ್ಲಿ ಟೆಕ್ಕಿ ಹೆಂಡತಿ ಆತ್ಮಹತ್ಯೆ

ಪಾರ್ಟಿಗಳಲ್ಲಿ ತನ್ನ ಸ್ನೇಹಿತರೊಂದಿಗೆ ಡ್ಯಾನ್ಸ್​ ಮಾಡುವಂತೆ ಒತ್ತಾಯಿಸುತ್ತಿದ್ದ ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಡಿ ಮೃತ ಗೃಹಿಣಿಯ ಪತಿ ಟೆಕ್ಕಿ ಭಾಸ್ಕರ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

bengaluru techie bhaskar wife suicide case
ಆತ್ಮಹತ್ಯೆ ಮಾಡಿಕೊಂಡ ಪದ್ಮಾವತಿ
author img

By

Published : Feb 5, 2021, 1:03 PM IST

ಬೆಂಗಳೂರು: ಪಾರ್ಟಿಗಳಲ್ಲಿ ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡುವಂತೆ ಗಂಡ ಒತ್ತಾಯಿಸಿದ್ದಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಶರಣಾಗಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

in article image
ಆತ್ಮಹತ್ಯೆ ಮಾಡಿಕೊಂಡ ಪದ್ಮಾವತಿ

ಪದ್ಮಾವತಿ ಆತ್ಮಹತ್ಯೆ ಮಾಡಿಕೊಂಡವರು.‌ ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪತಿ ಭಾಸ್ಕರ್​ನನ್ನು ಪೊಲೀಸರು ಬಂಧಿಸಿದ್ದಾರೆ‌‌. ವರ್ತೂರಿನ ನಿವಾಸಿ ಭಾಸ್ಕರ್ ಮಲ್ಟಿ‌ ನ್ಯಾಷನಲ್ ಕಂಪನಿಯೊಂದರಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಪದ್ಮಾವತಿ ಗೃಹಿಣಿಯಾಗಿದ್ದಳು.. 15 ವರ್ಷಗಳ ಹಿಂದೆ ಪದ್ಮಾವತಿ ಜೊತೆ ಟೆಕ್ಕಿ ಭಾಸ್ಕರ್ ಮದುವೆಯಾಗಿದ್ದರು. 11 ವರ್ಷದ ಗಂಡು ಮಗನಿದ್ದಾನೆ. ಅತಿಯಾದ ಪಾರ್ಟಿ - ಮೋಜು - ಮಸ್ತಿ ಮೈಗೂಡಿಸಿಕೊಂಡಿದ್ದ ಪತಿ ಮಹಾಶಯ ನಿರಂತರವಾಗಿ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ. ಪಾರ್ಟಿಗೆ ಹೆಂಡತಿಯನ್ನು ಕರೆದೊಯ್ದು ಸ್ನೇಹಿತರೊಂದಿಗೆ ಸೇರಿ ಡ್ಯಾನ್ಸ್​ ಮಾಡುವಂತೆ ಒತ್ತಾಯಿಸುತ್ತಿದ್ದ. ಹೇಳಿದಂತೆ ಕೆಳದಿದ್ದರೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಈತನ ಟಾರ್ಚರ್ ತಡೆಯಲಾಗದೇ ಪದ್ಮಾವತಿ ಈ ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಇನ್ನು ಇತ್ತೀಚೆಗೆ ಪಾರ್ಟಿಯೊಂದಕ್ಕೆ ಕರೆದೊಯ್ದು ಗೆಳೆಯರ ಜೊತೆ ಡ್ಯಾನ್ಸ್​ ಮಾಡುವಂತೆ‌ ಒತ್ತಾಯಿಸಿದ್ದಾನೆ. ಇದರಿಂದ‌ ಮನನೊಂದು ಕಳೆದ ಜ.28 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಪದ್ಮಾವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನೆ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡು ಆರೋಪಿ ಭಾಸ್ಕರ್​ನನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details