ಕರ್ನಾಟಕ

karnataka

ETV Bharat / state

ದಂಪತಿ ನಡುವೆ ಜಗಳ, ಪೆಟ್ರೋಲ್ ಸುರಿದು ಬೆಂಕಿ; ಪತಿ ಸಾವು, ಪತ್ನಿ ಗಂಭೀರ - ಗಂಡ ಹೆಂಡತಿ ನಡುವೆ ಜಗಳ

ಕ್ಷುಲ್ಲಕ ಕಾರಣಕ್ಕೆ ಗಂಡ, ಹೆಂಡತಿ ನಡುವೆ ಜಗಳ ನಡೆದು ಪತಿ ತನಗಲ್ಲದೇ ಪತ್ನಿ ಮೇಲೂ ಬೆಂಕಿ ಹಚ್ಚಿ ಸಾವನ್ನಪ್ಪಿರುವ ಘಟನೆ ನಡೆದಿದೆ.

fire case
ಬೆಂಕಿ ಪ್ರಕರಣ

By

Published : May 5, 2023, 12:52 PM IST

ಬೆಂಗಳೂರು: ಬನ್ನೇರುಘಟ್ಟ ವಡ್ಡರಪಾಳ್ಯದ ಮನೆಯೊಂದರಲ್ಲಿ ಕುಟುಂಬ ಕಲಹಕ್ಕೆ ಪತಿ ಬೆಂಕಿ ಹಚ್ಚಿಕೊಂಡು ಸುಟ್ಟು ಕರಕಲಾದ ಘಟನೆ ನಿನ್ನೆ(ಗುರುವಾರ) ರಾತ್ರಿ ನಡೆದಿದೆ. ಮಂಡ್ಯ ಮೂಲದ ಸಂತೋಷ್ ಹೆಂಡತಿ ಭಾನು ಜೊತೆ ಜಗಳ ತೆಗೆದು ತನ್ನ ಮತ್ತು ಹೆಂಡತಿಯ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು.

ಗಂಡ, ಹೆಂಡತಿ ನಡುವಿನ ಸಣ್ಣ ಜಗಳ ವಿಕೋಪಕ್ಕೆ ತಿರುಗಿ ದುರಂತ ಅಂತ್ಯ ಕಂಡಿದೆ. ಸಂತೋಷ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಹೆಂಡತಿ ಭಾನು ಅರೆಬೆಂದು ಆಸ್ಪತ್ರೆಗೆ ದಾಖಲಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟುಹೋಗಿವೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಮತ್ತು ಅಗ್ನಿಶಾಮಕದಳದವರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿದ್ದ ಮಾಜಿ ವಿದ್ಯಾರ್ಥಿ:ಮಧ್ಯಪ್ರದೇಶದ ಇಂದೋರ್​ನಲ್ಲಿ ಕಾಲೇಜಿನ ಪ್ರಾಂಶುಪಾಲೆಯನ್ನು ಮಾಜಿ ವಿದ್ಯಾರ್ಥಿಯೋರ್ವ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಫೆಬ್ರವರಿ ತಿಂಗಳಿನಲ್ಲಿ ನಡೆದಿತ್ತು. ಸಿಮ್ರೋಲ್​ ಪೊಲೀಸ್​ ಠಾಣಾ ವ್ಯಾಪ್ತಿಯ ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ವಿಮುಕ್ತ ಶರ್ಮಾ (54) ಎಂಬುವವರೇ ಕಾಲೇಜಿನ ಮಾಜಿ ವಿದ್ಯಾರ್ಥಿ 24 ವರ್ಷದ ಅಶುತೋಷ್ ಶ್ರೀವಾಸ್ತವ್​ನಿಂದ ಹತ್ಯೆಗೊಳಗಾದವರು.

ತವರಿಗೆ ಹೇಳದೆ ಹೋದ ಹೆಂಡತಿಗೆ ಬೆಂಕಿ ಹಚ್ಚಿದ ಪತಿ: ಕಳೆದ ಅಕ್ಟೋಬರ್​ 2022 ರಂದು ಈ ಘಟನೆ ನಡೆದಿತ್ತು. ಪತಿ ಯಾವುದೋ ಕಾರಣಕ್ಕಾಗಿ ಬೇರೆ ಊರಿಗೆ ತೆರಳಿದಾಗ ಪತ್ನಿ ಅಜ್ಜಿಯ ಮನೆಗೆ ಹೋಗಿದ್ದಾರೆ. ಬಳಿಕ ರಾತ್ರಿ ವೇಳೆ ಮನೆಗೆ ವಾಪಸ್​ ಆದ ಪತಿಗೆ, ಪತ್ನಿ ಇಲ್ಲದಿರುವುದು ಕೋಪ ತರಿಸಿದೆ. ಬಳಿಕ ಆಕೆ ಅಜ್ಜಿಯ ಮನೆಗೆ ಹೋಗಿರಬಹುದು ಎಂದು ಭಾವಿಸಿ ಅಲ್ಲಿಗೆ ಬಂದಿದ್ದಾನೆ. ಪತ್ನಿಯನ್ನು ಅಜ್ಜಿಯ ಮನೆಯಲ್ಲಿ ಕಂಡ ಪತಿಗೆ ವಿಪರೀತ ಕೋಪ ಬಂದಿದೆ. ತನಗೆ ಹೇಳದೇ ಇಲ್ಲಿಗೆ ಯಾಕೆ ಬಂದೆ ಎಂದು ಗದರಿದ್ದಾರೆನೆ. ಬಳಿಕ ಮನೆಗೆ ಬರಲು ಕರೆದಿದ್ದಾನೆ. ಆದರೆ, ಪತ್ನಿ ನಾಳೆ ಬರುವೆ ಎಂದು ಹೇಳಿದ್ದಾರೆ. ಇದರಿಂದ ಕ್ರೋಧಗೊಂಡ ಪತಿ, ಬಾರದಿದ್ದರೆ ಪೆಟ್ರೋಲ್​ ಹಾಕಿ ಸುಡುವೆ ಎಂದು ಬೆದರಿಸಿದ್ದಾನೆ. ಇಬ್ಬರ ಮಧ್ಯೆ ವಾಗ್ವಾದ ಉಂಟಾಗಿ ಮನೆಯಲ್ಲಿದ್ದ ಪೆಟ್ರೋಲ್​ ತಂದ ಪತಿ, ಪತ್ನಿಯ ಮೇಲೆ ಸುರಿದಿದ್ದಾನೆ. ಬೆಂಕಿ ಕಡ್ಡಿ ಹಚ್ಚಿ ಸುಡುವೆ ಎಂದು ಮುಂದಾದಾಗ ತಡೆಯಲು ಪತ್ನಿ ಯತ್ನಿಸಿದ್ದಾರೆ. ಈ ವೇಳೆ ಅಚಾನಕ್ಕಾಗಿ ಕಡ್ಡಿ ಹೊತ್ತಿಕೊಂಡು ಪತ್ನಿಯ ಸೀರೆಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಮಹಿಳೆ ತೀವ್ರ ಸುಟ್ಟ ಗಾಯಕ್ಕೆ ತುತ್ತಾಗಿದ್ದರು.

ಇದನ್ನೂ ಓದಿ:ಶಾಲೆಯಿಂದ ಮರಳುತ್ತಿದ್ದ ವಿದ್ಯಾರ್ಥಿನಿಗೆ ಪೊಲೀಸ್​ ಕಾನ್ಸ್‌ಟೇಬಲ್‌ ಲೈಂಗಿಕ ದೌರ್ಜನ್ಯ; ಕೆಲಸದಿಂದ ಅಮಾನತು

ABOUT THE AUTHOR

...view details