ಕರ್ನಾಟಕ

karnataka

ETV Bharat / state

ಗಂಡನಲ್ಲ ಇವ ಗಮಾರ.. ಗೆಳೆಯರೊಂದಿಗೆ ಮಂಚ ಏರು ಎನ್ನುತ್ತಿದ್ನಂತೆ.. ಪ್ರೀತಿಸಿ ಕೈಹಿಡಿದವಳ ಬಾಳೇ ನರಕ.. ಕೊನೆಗೀಗ ಜೈಲುಹಕ್ಕಿ! - ಅನಿಶ್ ರ್ಯಾನ್ ಡೇನಿಯಲ್ ಡಿಸೋಜಾ

ಪತ್ನಿಯನ್ನು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ಆಕೆ ಒಪ್ಪದಿದ್ದಾಗ ಪತಿಯೇ ಆಕೆಗೆ ಜೀವಬೆದರಿಕೆ ಹಾಕಿ ಪತ್ನಿಯ ಖಾಸಗಿ ಫೊಟೋ ಹಾಗೂ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಹಾಗಾಗಿ ಸಂತ್ರಸ್ತೆ ಈಗ ಪತಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು ತನಿಖೆ ಮುಂದುವರೆದಿದೆ.

bng

By

Published : Sep 2, 2019, 4:13 PM IST

Updated : Sep 3, 2019, 5:33 PM IST

ಬೆಂಗಳೂರು: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಗೆ ವಿಲನ್ ಆಗಿ ಕಿರುಕುಳ ನೀಡ್ತಿದ್ದ. ನೊಂದ ಸಂತ್ರಸ್ತೆ ಸೈಬರ್ ಹಾಗೂ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದರು. ಸದ್ಯ ಪೂರ್ವ ವಲಯದ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶದ ಮೂಲದ ಸಂತ್ರಸ್ತೆ ಕಳೆದ 2 ವರ್ಷಗಳ ಹಿಂದೆ ಅನಿಶ್ ರ್ಯಾನ್ ಡೇನಿಯಲ್ ಡಿಸೋಜಾ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರೂ ಮೂಲತ: ಮಧ್ಯಪ್ರದೇಶದ ಗ್ವಾಲಿಯರ್​ನವರಾಗಿದ್ದು ‌ಮದುವೆಯ ನಂತರ 2 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು.ಸಂತ್ರಸ್ತೆ ವೃತ್ತಿಯಲ್ಲಿ ಖಾಸಗಿ ಶಾಲಾ ಶಿಕ್ಷಕಿಯಾದ್ರೆ, ಆರೋಪಿ ಪತಿರಾಯ ಖಾಸಗಿ ಕಂಪನಿಯೊಂದರಲ್ಲಿ ಹೆಚ್‌ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ, ಇತ್ತೀಚೆಗೆ ಮನಸ್ಥಾಪ ಉಂಟಾಗಿ ಪ್ರತಿ ದಿನ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು.

ಖಾಸಗಿ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಪತಿ..

ಪತಿರಾಯ‌ ವೀಕೆಂಡ್​ನಲ್ಲಿ ಪಾರ್ಟಿ ಮುಗಿಸಿ ಮನೆಗೆ ಗೆಳೆಯರೊಂದಿಗೆ ಬಂದು ಕೈ ಹಿಡಿದ ಪತ್ನಿಯನ್ನ ಗೆಳೆಯರ ಜೊತೆ ಸೆಕ್ಸ್ ಮಾಡು ಅಂತಾ ಹಿಂಸೆ ನೀಡ್ತಿದ್ದನಂತೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದಾಗ ಸಂತ್ರಸ್ತೆ ಒಪ್ಪದಿದ್ದಾಗ ಜೀವಬೆದರಿಕೆ ಹಾಕಿ ಪತ್ನಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದ.ಇದರಿಂದ ಸಂತ್ರಸ್ತೆ ಪತಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಪತಿರಾಯ ಅನಿಶ್ ಡೇನಿಯಲ್‌ ಡಿಸೋಜಾನನ್ನ ಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Last Updated : Sep 3, 2019, 5:33 PM IST

ABOUT THE AUTHOR

...view details