ಬೆಂಗಳೂರು :ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ವನಿತಾ ಸಹಾಯವಾಣಿಯನ್ನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಕಚೇರಿಯಲ್ಲಿ ತೆರೆಯಲಾಗಿದ್ದು, ಸದ್ಯ ಬಹಳಷ್ಟು ಕರೆಗಳು ಬರುತ್ತಿವೆ.
ಲಾಕ್ಡೌನ್ ಬಳಿಕ ಹೆಚ್ಚಿದ ಕೌಟುಂಬಿಕ ಕಲಹಗಳು.. ವನಿತಾ ಸಹಾಯವಾಣಿಗೆ ನೂರಾರು ಕರೆ! - bangalore lockdown latest news
ಗಂಡ-ಹೆಂಡತಿ ನಡುವಿನ ಜಗಳವೂ ಸೇರಿ ಹೀಗೆ ನಾನಾ ರೀತಿಯ ಸಮಸ್ಯೆಗಳು ಉದ್ಭವಿಸುತ್ತಿವೆ. ಹಾಗಾಗಿ ಲಾಕೌಡೌನ್ ಘೋಷಣೆ ಬಳಿಕ ವನಿತಾ ಸಹಾಯವಾಣಿಯಲ್ಲಿ 107 ಪ್ರಕರಣ ಈಗಾಗಲೇ ಬೆಂಗಳೂರಿನಲ್ಲಿ ದಾಖಲಾಗಿವೆ.

ಲಾಕ್ಡೌನ್ ಬಳಿಕ ಹೆಚ್ಚಿತೇ ಕೌಟುಂಬಿಕ ಕಲಹಗಳು...ವನಿತಾ ಸಹಾಯವಾಣಿಗೆ ಬರ್ತಿದೆ ನೂರಾರು ಕರೆಗಳು
ಲಾಕ್ಡೌನ್ ಬಳಿಕ ಹೆಚ್ಚಿತೇ ಕೌಟುಂಬಿಕ ಕಲಹಗಳು.. ವನಿತಾ ಸಹಾಯವಾಣಿಗೆ ಬರ್ತಿವೆ ನೂರಾರು ಕರೆಗಳು
ಸದ್ಯ ಕೊರೊನಾ ಕಾರಣ ಸಿಲಿಕಾನ್ ಸಿಟಿಯ ಬಹಳಷ್ಟು ಮಂದಿ ಮನೆಯಲ್ಲಿದ್ದಾರೆ. ಈ ವೇಳೆ ಗಂಡ-ಹೆಂಡತಿ ನಡುವಿನ ಜಗಳವೂ ಸೇರಿ ಹೀಗೆ ನಾನಾ ರೀತಿಯ ಸಮಸ್ಯೆಗಳು ಉದ್ಭವಿಸುತ್ತಿವೆ. ಹಾಗಾಗಿ ಲಾಕೌಡೌನ್ ಘೋಷಣೆ ಬಳಿಕ ವನಿತಾ ಸಹಾಯವಾಣಿಯಲ್ಲಿ 107 ಪ್ರಕರಣ ಈಗಾಗಲೇ ಬೆಂಗಳೂರಿನಲ್ಲಿ ದಾಖಲಾಗಿವೆ.
ಇನ್ನೂ ವನಿತಾ ಸಹಾಯವಾಣಿಯ ಪ್ರಮುಖ ಸಮಾಲೋಚಕಿ ರಾಣಿಶೆಟ್ಟಿ ಹಾಗೂ ಅಪರ್ಣಾ ಖುದ್ದಾಗಿ ತಾವೇ ಫೋನ್ ಮೂಲಕ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಈಟಿವಿ ಭಾರತ್ ಜೊತೆ ವನಿತಾ ಸಹಾಯವಾಣಿ ಅಧ್ಯಕ್ಷೆ ರಾಣಿ ಶೆಟ್ಟಿ ಯಾವ ರೀತಿ ಕರೆಗಳು ಬರುತ್ತಿದೆ ಅನ್ನೋದ್ರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.