ಬೆಂಗಳೂರು : ಕೊರೊನಾ ಭೀತಿಯಿಂದ ಇನ್ನೊಬ್ಬರ ಸಮೀಪ ನಿಲ್ಲಲು ಜನ ಹಿಂಜರಿಯುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಬಿಬಿಎಂಪಿ ಸದಸ್ಯರೊಬ್ಬರು ಅನಾಥ ಶವವನ್ನು ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅನಾಥ ಶವ ಸಾಗಿಸಿ ಮಾನವೀಯತೆ ಮೆರೆದ ಬಿಬಿಎಂಪಿ ಸದಸ್ಯ - Humanitarian work by BBMP Member
ಮಲ್ಲಸಂದ್ರ ವಾರ್ಡ್ 13ರ ಬಿಬಿಎಂಪಿ ಸದಸ್ಯ ಲೋಕೇಶ್ ಪೈಪ್ ಲೈನ್ ಪಾರ್ಕ್ ಬಳಿ ಅನಾಥವಾಗಿದ್ದ ಶವವನ್ನು ಅಂತ್ಯ ಸಂಸ್ಕಾರ ಮಾಡಲು ಆ್ಯಂಬುಲೆನ್ಸ್ಗೆ ಸಾಗಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಾನವೀಯತೆ ಮೆರೆದ ಬಿಬಿಎಂಪಿ ಸದಸ್ಯ
ನಗರದ ಮಲ್ಲಸಂದ್ರ ವಾರ್ಡ್ 13ರ ಪಾಲಿಕೆ ಸದಸ್ಯ ಲೋಕೇಶ್ ಪೈಪ್ ಲೈನ್ ಪಾರ್ಕ್ ಬಳಿ ಅನಾಥವಾಗಿದ್ದ ಶವವನ್ನು ಅಂತ್ಯ ಸಂಸ್ಕಾರ ಮಾಡಲು ಆ್ಯಂಬುಲೆನ್ಸ್ಗೆ ಸಾಗಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ವತಃ ಲೋಕೇಶ್ ಅವರೇ ಪಿಪಿಇ ಕಿಟ್ ಧರಿಸಿ ಶವ ಸಾಗಾಟದಲ್ಲಿ ಆರೋಗ್ಯ ಸಿಬ್ಬಂದಿಯೊಂದಿಗೆ ಸಹಕರಿಸಿದ್ದಾರೆ.
ಪಾಲಿಕೆ ಸದಸ್ಯರ ಕಾರ್ಯಕ್ಕೆ ಮೇಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated : Jul 15, 2020, 9:42 AM IST