ಬೆಂಗಳೂರು :ಲಾಕ್ ಡೌನ್ ವೇಳೆ ಕೋವಿಡ್ ಮಾರ್ಗಸೂಚಿ ಉಲ್ಲಂಘಿದ್ದಕ್ಕಾಗಿ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿರುವುದಾಗಿ ಯುವಕನೋರ್ವ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ತನಿಖೆ ನಡೆಸುವಂತೆ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ. ಭಟ್ಕಳ ಪಿಎಸ್ ಐ ಭರತ್ ಕುಮಾರ್ ಹಾಗು ಇನ್ ಸ್ಪೆಕ್ಟರ್ ದಿವಾಕರ್ ಸೇರಿದಂತೆ ಇನ್ನಿತರರ ಮೇಲೆ ಪೊಲೀಸ್ ಇಲಾಖಾ ತನಿಖೆಗೆ ಆಯೋಗ ಆದೇಶಿಸಿದ್ದು, ಜೊತೆಗೆ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕೊರೊನಾ ಬಿಕ್ಕಟ್ಟಿನಿಂದಾಗಿ 2020ರಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಭಟ್ಕಳದಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಮೊಹಮ್ಮದ್ ಹಸನ್ ಇರ್ಷಾದ್ ಎಂಬುವರು ಮೆಡಿಕಲ್ ಗೆ ಹೋಗಿ ಔಷಧಿ ಖರೀದಿಸಿ ಮನೆಗೆ ಬರುವಾಗ ಗಸ್ತು ತಿರುಗುತ್ತಿದ್ದ ಪೊಲೀಸರು ಇರ್ಷಾದ್ ಮೇಲೆ ಲಾಠಿ ಪ್ರಹಾರ ನಡೆಸಿ ಮನಬಂದಂತೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಕಾಲು ಹಾಗೂ ತೊಡೆಗಳ ಮೇಲೆ ಬಾಸುಂಡೆ ಬಂದಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.