ಕರ್ನಾಟಕ

karnataka

ನಟ ದರ್ಶನ್‌ಗೆ 5 ವರ್ಷ ನಿಷೇಧ ಹೇರಲು ಫಿಲ್ಮ್‌ ಛೇಂಬರ್‌ಗೆ ಮನವಿ

By

Published : Jul 20, 2021, 3:29 PM IST

Sandalwood Actor Darshan: ನಟ ದರ್ಶನ್ ಮಾತಿಗೆ ಕಡಿವಾಣ ಹಾಕಬೇಕು. ಇದರ ಜೊತೆಗೆ ಚಿತ್ರರಂಗದಿಂದ ಅವರಿಗೆ ಮುಂದಿನ 5 ವರ್ಷಗಳ ಕಾಲ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆಯೊಂದು ಫಿಲ್ಮ್‌ ಛೇಂಬರ್‌ಗೆ ಮನವಿ ಮೂಲಕ ಒತ್ತಾಯಿಸಿದೆ.

ಫಿಲ್ಮ್ ಚೇಂಬರ್​ಗೆ ಮಾನವ ಹಕ್ಕುಗಳ ನಿಗ್ರಹದಳ ಸಂಸ್ಥೆ ಒತ್ತಾಯ
ಫಿಲ್ಮ್ ಚೇಂಬರ್​ಗೆ ಮಾನವ ಹಕ್ಕುಗಳ ನಿಗ್ರಹದಳ ಸಂಸ್ಥೆ ಒತ್ತಾಯ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರ ವಿರುದ್ಧ ಸಾಲಕ್ಕೆ ಶ್ಯೂರಿಟಿ ಪ್ರಕರಣ ಹಾಗು ಚಿತ್ರನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ಆರೋಪ-ಪ್ರತ್ಯಾರೋಪಗಳು ಕನ್ನಡ ಚಿತ್ರರಂಗದಲ್ಲಿ ಬೇಸರ ಮೂಡಿಸಿದೆ.

ಈ ಕುರಿತಾಗಿ ಇಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹದಳ ಸಂಸ್ಥೆಯ ಅಧ್ಯಕ್ಷ ಮೋಹನ್ ಅವರ ನಿಯೋಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ನಟನಿಗೆ ಐದು ವರ್ಷಗಳ ಕಾಲ ನಿಷೇಧ ಹೇರುವಂತೆ ಆಗ್ರಹಿಸಿ ಸೂಕ್ತ ಕ್ರಮಕ್ಕೆ ದೂರು ನೀಡಿದರು.

ದೂರು ಪ್ರತಿ

ದರ್ಶನ್ ಮಾತಿಗೆ ಕಡಿವಾಣ ಹಾಕಬೇಕು. ಅವರ ಅಸಭ್ಯ ವರ್ತನೆ ಕನ್ನಡ ಚಿತ್ರರಂಗವನ್ನು ಹಾಳು ಮಾಡುತ್ತಿದೆ. ನಾಡಿನ ಯುವ ಸಮೂಹವನ್ನು ದಿಕ್ಕು ತಪ್ಪಿಸುವ ಅವರು ಕೊಲೆಗಡುಕರಾಗಲು ಪ್ರೇರೇಪಣೆ ನೀಡುತ್ತಿದ್ದಾರೆ ಎಂದು ಸಲ್ಲಿಸಲಾದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಸಮಾಜದ ಮೇಲೆ ದುಷ್ಪರಿಣಾಮ ಬೀರುವಂತೆ ಅಸಭ್ಯವಾಗಿ ಮಾಧ್ಯಮದ ಮುಂದೆ ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿರುವ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಣೇಶ್ ಇಬ್ಬರನ್ನೂ ಚಲನಚಿತ್ರ ರಂಗದಿಂದ ಬಹಿಷ್ಕರಿಸಬೇಕು. ಅವರು ಯಾವುದೇ ರೀತಿಯ ಸಿನಿಮಾ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಇದನ್ನೂ ಓದಿ: ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಶಿಲ್ಪಾ ಶೆಟ್ಟಿ ಪತಿ ಕುಂದ್ರಾ.. ಇಲ್ಲಿವೆ ಅವರ ಜೀವನದ 5 ವಿವಾದಗಳು!

ಕನ್ನಡದ ಮೇರುನಟರಾದ ರಾಜ್‌ಕುಮಾರ್, ವಿಷ್ಣುವರ್ಧನ್​, ಅಂಬರೀಷ್, ಶಂಕರ್‌ನಾಗ್, ಅನಂತನಾಗ್, ಉದಯಕುಮಾರ್.. ಹೀಗೆ ಹಲವಾರು ನಟರು ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಮಟ್ಟದಲ್ಲಿ ಗೌರವ ತಂದು ಕೊಟ್ಟು ಕರ್ನಾಟಕದ ಕೀರ್ತಿಪತಾಕೆ ಹಾರಿಸಿದ್ದಾರೆ. ಆದರೆ ಈ ನಟರು ನಮ್ಮ ನಾಡಿನ ಮಾನವನ್ನು ದೇಶಾದ್ಯಂತ ತುಚ್ಛ ಮಾತುಗಳಿಂದ ಹಾಳುಮಾಡುತ್ತಿದ್ದಾರೆ. ಇವರ ಮಾತುಗಳು ನಾಡಿನ ಯುವಕರನ್ನು ದಿಕ್ಕು ತಪ್ಪುವಂತೆ ಪ್ರೇರೇಪಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

For All Latest Updates

ABOUT THE AUTHOR

...view details