ಕರ್ನಾಟಕ

karnataka

ETV Bharat / state

ಕಾಲೇಜು ಬಳಿ ಮಾದಕ ವಸ್ತು ಮಾರಾಟ : ಓರ್ವ ವಿದೇಶಿಗನ ಬಂಧನ - ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ

ಈತ ನೈಜೀರಿಯಾ ದೇಶದಿಂದ 2015ರಲ್ಲಿ ಭಾರತಕ್ಕೆ ಬಂದು ನೆಲೆಸಿದ್ದು, ಅಮೀನ್ ಎಂಬಾತನಿಂದ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಎಂದು ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ. ಇನ್ನು, ಬಂಧಿತನಿಂದ 25 ಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು 4 ಎಕ್ಸಿಟೆಸಿ ಟ್ಯಾಬ್ಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ..

ಓರ್ವ ವಿದೇಶಿಗನ ಬಂಧನ
Hulimavu police arrest foreign man

By

Published : Jul 3, 2021, 4:58 PM IST

ಬೆಂಗಳೂರು : ನಗರದಲ್ಲಿ ಆಗ್ನೇಯ ವಿಭಾಗದ ಹುಳಿಮಾವು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕಾಲೇಜು ಬಳಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿಗನನ್ನು ಬಂಧಿಸಿದ್ದಾರೆ.

ಊಡೇಮ್ಬ ಇಸಾಕ್ (42) ಬಂಧಿತ ಆರೋಪಿ. ಈತ ಮಾದಕ ವಸ್ತುಗಳನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಪೊಲೀಸರು ದೊಡ್ಡಕಮ್ಮನಹಳ್ಳಿ ಎಇಸಿಎಸ್ ಮಾರುತಿ ಡೆಂಟಲ್ ಹುಳಿಮಾವು ಕಾಲೇಜಿನ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.

ಈತ ನೈಜೀರಿಯಾ ದೇಶದಿಂದ 2015ರಲ್ಲಿ ಭಾರತಕ್ಕೆ ಬಂದು ನೆಲೆಸಿದ್ದು, ಅಮೀನ್ ಎಂಬಾತನಿಂದ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಎಂದು ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ. ಇನ್ನು, ಬಂಧಿತನಿಂದ 25 ಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು 4 ಎಕ್ಸಿಟೆಸಿ ಟ್ಯಾಬ್ಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿ ವಿರುದ್ಧ ಎನ್​ಡಿಪಿಎಸ್ ಮತ್ತು ಫಾರಿನ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details