ಕರ್ನಾಟಕ

karnataka

ETV Bharat / state

ಹುಳಿಮಾವು ಕೆರೆ ದುರುಂತ: ಸಮಗ್ರ ವರದಿ ಕೇಳಿದ ನ್ಯಾಯಾಲಯ

ಬೆಂಗಳೂರಿನ ಹುಳಿಮಾವು ಕೆರೆ ದುರಂತದಲ್ಲಿ ಬಿಡಿಎ, ಬಿಬಿಎಂಪಿ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಈಗ ನೀರಿ ಅವಶ್ಯಕತೆ ಪಡೆದು ಸಮಗ್ರ ವರದಿ ನೀಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.

By

Published : Nov 28, 2019, 8:00 AM IST

hulimavu lake Tragedy in bangalore
ಹುಳಿಮಾವು ಕೆರೆ ದರುಂತ

ಬೆಂಗಳೂರು: ಹುಳಿಮಾವು ಕೆರೆ ಕೋಡಿ ಒಡೆದಿದ್ದಕ್ಕೆ ನೀವು ಕಾರಣ ಎಂದು ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ಪರಸ್ಪರ ಆರೋಪದಲ್ಲಿ ತೊಡಗಿದ್ದಾರೆ.

ಹುಳಿಮಾವು ಕೆರೆ ದರುಂತ

ನೊಂದಿರುವ ಜನರಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು, ರಾಜ್ಯ ಸರ್ಕಾರ ಬಿಬಿಎಂಪಿ ಹಾಗು‌ ಬಿಡಿಎ ನಡುವೆ ಮಧ್ಯಸ್ಥಿಕೆ ವಹಿಸಬೇಕು ಎಂದು ಅಭಿಪ್ರಾಯಪಟ್ಟು ನಂತರ ಘಟನೆಗೆ ನಿಖರವಾದ ಕಾರಣ ಏನು ಅಂತ ಪತ್ತೆ ಹಚ್ಚ ಬೇಕು ಎಂದು ಸೂಚನೆ ನೀಡುವುದರ ಜೊತೆಗೆ ಮತ್ತೊಮ್ಮೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು. ಅಗತ್ಯವಿದ್ದಲ್ಲಿ‌ ರಾಷ್ಟ್ರೀಯ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ಸಹಾಯವನ್ನು ಪಡೆದು ಯಾವ ಕಾರಣಕ್ಕೆ ಕೋಡಿ ಒಡೆಯಿತು ಎಂದು ಪತ್ತೆ ಹಚ್ಚಿ ಎಂದು ನ್ಯಾಯಾಲಯದ ಮುಂದೆ ನಿಖರವಾದ‌ ಕಾರಣ ಮುಂದಿನ ವಿಚಾರಣಾ ದಿನದಂದು ತಿಳಿಸಬೇಕು ಮುಖ್ಯ ನ್ಯಾಯಮೂರ್ತಿಗಳು ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ನಗರದ ಕೆರೆಗಳ‌ ಸಂರಕ್ಷಣೆ ವಿಚಾರವಾಗಿ, ಹೈಕೋರ್ಟ್ ಆದೇಶದಂತೆ ಸಮಗ್ರ ಅಧ್ಯಯನ ನಡೆಸಿದ ಬಳಿಕವಷ್ಟೇ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಏಜೆನ್ಸಿಯಾದ ನೀರಿ ಒಪ್ಪಿಗೆ ನೀಡಿ ಅದಕ್ಕೆ ಸಂಬಂಧಿಸಿದಂತೆ ನೀರಿಯಿಂದ ಪ್ರಸ್ತಾವ ಸಲ್ಲಿಕೆಯಾಗಬೇಕು. ಅದನ್ನು ಸರ್ಕಾರ ಅನುಮೋದಿಸಬೇಕಿರುವ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಿದೆ.

ABOUT THE AUTHOR

...view details