ಬೆಂಗಳೂರು:ಹುಳಿಮಾವು ಕೆರೆ ಕೋಡಿ ಒಡೆದು 339 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದ್ರೂ ಕೇವಲ 156 ಮನೆಗಳಿಗೆ ಮಾತ್ರ ಪರಿಹಾರ ಘೋಷಿಸಲಾಗಿದೆ ಎಂದು ಬಿಬಿಎಂಪಿ ವಿರೋಧ ಪಕ್ಷ ನಾಯಕ ಅಬ್ದುಲ್ ವಾಜಿದ್ ಆರೋಪಿಸಿದ್ದಾರೆ.
ಹುಳಿಮಾವು ಕೆರೆ ದುರಂತ, ಪರಿಹಾರದಲ್ಲಿ ತಾರತಮ್ಯ: ಅಬ್ದುಲ್ ವಾಜೀದ್ ಆರೋಪ - ಬಿಬಿಎಂಪಿ ವಿರೋಧ ಪಕ್ಷ ನಾಯಕ, ಅಬ್ದುಲ್ ವಾಜಿದ್ ವಿಷಾದ
ಹುಳಿಮಾವು ಕೆರೆ ಕೋಡಿ ಒಡೆದು 339 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದ್ರೂ ಕೇವಲ 156 ಮನೆಗಳಿಗೆ ಮಾತ್ರ ಪರಿಹಾರ ಘೋಷಿಸಲಾಗಿದೆ ಎಂದು ಬಿಬಿಎಂಪಿ ವಿರೋಧ ಪಕ್ಷ ನಾಯಕ ಅಬ್ದುಲ್ ವಾಜಿದ್ ಆರೋಪಿಸಿದ್ದಾರೆ.
ಹುಳಿಮಾವು ಕೆರೆ ದುರಂತ, ಪರಿಹಾರದಲ್ಲಿ ತಾರತಮ್ಯವಾಗಿದೆ: ಅಬ್ದುಲ್ ವಾಜೀದ್ ಆರೋಪ
ಸರ್ಕಾರದಿಂದ 40 ಸಾವಿರ ರೂಪಾಯಿ ಪರಿಹಾರ, ಬಿಬಿಎಂಪಿಯಿಂದ 10 ಸಾವಿರ ಪರಿಹಾರ ನೀಡುವ ಬದಲು ಐವತ್ತು ಸಾವಿರದವರೆಗೆ ಹೆಚ್ಚಿಸಬೇಕೆಂದು ಒತ್ತಾಯ ಮಾಡಿದರು. ಅಲ್ಲದೆ ಕೆರೆಗಳ ಅಭಿವೃದ್ಧಿಗಾಗಿ ಕೇವಲ ಆರು ಕೋಟಿ ನಿಗದಿಪಡಿಸಿದ್ದು, ಇದನ್ನು ಹೆಚ್ಚು ಮಾಡಬೇಕು. ಬೆಂಗಳೂರಲ್ಲಿ 208 ಕೆರೆಗಳಿವೆ. ಇವುಗಳ ನಿರ್ವಹಣೆಗೆ ಕೇವಲ ಆರು ಅಧಿಕಾರಿಗಳಿದ್ದು, ಸಿಬ್ಬಂದಿ ಕೊರತೆಯಿದೆ. ಹೀಗಾಗಿ 25ರಿಂದ 30 ವಿವಿಧ ಹಂತದ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.