ಕರ್ನಾಟಕ

karnataka

ETV Bharat / state

ಹುಳಿಮಾವು ಕೆರೆ ದುರಂತ: ಆದ್ರೂ ಶಾಸಕ ಸತೀಶ್ ರೆಡ್ಡಿ ನಾಪತ್ತೆ..! - MLA Satish Reddy escape

ಹುಳಿಮಾವು ಕೆರೆ ದುರಂತದಲ್ಲಿ ಸಿಲುಕಿದ್ದ ಜನರ ಗೋಳು‌ ಇನ್ನೂ ನಿಂತಿಲ್ಲ. ಒಟ್ಟು ಆರು ಲೇಔಟ್ ಸೇರಿದಂತೆ ಕೃಷ್ಣ ಲೇಔಟ್ ಜನರ ಜೀವನ ಅಂತಂತ್ರವಾಗಿದೆ. ಇಷ್ಟೆಲ್ಲಾದ್ರೂ ಶಾಸಕ ಸತೀಶ್ ರೆಡ್ಡಿ ಮಾತ್ರ ನಾಪತ್ತೆಯಾಗಿದ್ದಾರೆ.

hulimavu lake disaster in bengalore
ಸರಿಯಾಗಲಿಲ್ಲ ಹುಳಿಮಾವು ಕೆರೆ ದುರಂತ

By

Published : Nov 28, 2019, 5:00 AM IST

ಬೆಂಗಳೂರು:ಹುಳಿಮಾವು ಕೆರೆ ದುರಂತದಲ್ಲಿ ಸಿಲುಕಿದ್ದ ಜನರ ಗೋಳು‌ ಇನ್ನೂ ನಿಂತಿಲ್ಲ. ಪರಿಹಾರವೇನೋ‌‌ ಬಂತು, ಅದ್ರೇ ಕ್ಷೇತ್ರದ ಜನ್ರಿಗೆ ಸ್ಪಂದಿಸಬೇಕಿದ್ದ ಶಾಸಕ ಮಾತ್ರ ಕೈಗೆ ಸಿಕ್ತಿಲ್ಲಾ.

ಒಟ್ಟು ಆರು ಲೇಔಟ್ ಸೇರಿದಂತೆ ಕೃಷ್ಣ ಲೇಔಟ್ ಜನರ ಜೀವನ ಅಂತಂತ್ರವಾಗಿದೆ. ಆದ್ರೂ ಸಹ ಶಾಸಕ ಸತೀಶ್ ರೆಡ್ಡಿ ಮಾತ್ರ ನಾಪತ್ತೆಯಾಗಿದ್ದಾರೆ. ಮೂರು ದಿನ ಕಳೆದ್ರೂ ಶಾಸಕ ಸತೀಶ್ ರೆಡ್ಡಿ ಪೋನ್ ಸ್ವಿಚ್ ಆಫ್ ಆಗಿದೆ. ಸಿಎಂ ಬಿಎಸ್ ವೈ ಸೇರಿದಂತೆ ಸಚಿವರು ಹಾಗೂ ಸಂಸದರು ಸ್ಥಳಕ್ಕೆ ಬೇಟಿ ನೀಡಿದ್ದರು. ಆದ್ರೇ ಮಾನ್ಯ ಶಾಸಕರು ಮಾತ್ರ ನಾಪತ್ತೆಯಾಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಹುಳಿಮಾವು ಕೆರೆ ದುರಂತ

ಈ ದುರಂತಕ್ಕೆ ಉಪಮೇಯರ್ ರಾಮ್ ಮೋಹನ್ ರಾಜ್ ಕಾರಣ ಅನ್ನೊ ಆರೋಪಗಳು ಸಹ ಕೇಳಿಬಂದಿವೆ. ಹುಳಿಮಾವು ಕೆರೆ ಏರಿಯ ಮೇಲೆ ಕಟ್ಟೆ ಗಂಗಮ್ಮ ದೇವಸ್ಥಾನ ಇದೆ. ದೇವಸ್ಥಾನದಲ್ಲೂ ಕೆರೆ ನೀರು ತುಂಬಿಕೊಳ್ಳುತ್ತಿತ್ತು. ಜೊತೆಗೆ ಸ್ಥಳೀಯ ನಿವಾಸಿಗಳು ಕೂಡ ಕೆರೆ ನೀರಿನ ವಾಸನೆ ಕುರಿತು ಉಪಮೇಯರ್​ಗೆ ದೂರು ಕೊಟ್ಟಿದ್ರು. ಹೀಗಾಗಿ ಉಪಮೇಯರ್ ಅಧಿಕಾರಿ ಶಿಲ್ಪಾಗೆ ಸೂಚನೆ ಕೊಟ್ಟಿದ್ದು, ನೀರು ಬೀಡಲು ಹೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಕೆರೆ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಹಾಗೂ ಎಇ ಕಾರ್ತೀಕ್‌ ಸೇರಿದಂತೆ 8 ಮಂದಿಯನ್ನ ವಿಚಾರಣೆಗೆ ಒಳಡಿಸಲಾಗಿದ್ದು, ತನಿಖೆಯ ಪ್ರಾಥಮಿಕ ಹಂತ ಕೂಡ ಮುಗಿದಿದೆ. ಆದ್ರೇ ಈ ಪ್ರಕರಣವನ್ನ ಮುಚ್ಚಿ ಹಾಕೋ ಪ್ರಯತ್ನ ಸಹ ಆಗುತ್ತಿದೆ ಎನ್ನಲಾಗುತ್ತಿದೆ.

ಇನ್ನು ಈ ಆರೋಪಕ್ಕೆ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ ಉಪಮೇಯರ್ ರಾಮ್ ಮೋಹನ್ ರಾಜ್, ನಾನು ಈಗಾಗಲೇ ಈ ಕುರಿತು ಆದಷ್ಟು ಬೇಗ ತನಿಖೆ ನಡೆಸುವಂತೆ ಸರ್ಕಲ್ ಇನ್ಸ್ ಪೆಕ್ಟರ್ ಗೆ ಹೇಳಿದ್ದೇನೆ. ವಿನಾಕಾರಣ ನನ್ನ ಮೇಲೆ ಆರೋಪವನ್ನು ಮಾಡಲಾಗಿದೆ. ಇದರಿಂದ ನನಗೆ ಯಾವುದೇ ಲಾಭವಿಲ್ಲ. ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ಮಾಡಿದ್ದು, ಅವರನ್ನು ಖಂಡಿತ ಬಿಡುವುದಿಲ್ಲ ಎಂದ ಅವರು, ಶಾಸಕರಿಗೆ ಬೆನ್ನು ನೋವು ಇರುವುದರಿಂದ ಅವರು ಆಸ್ಪತ್ರೆಯಲ್ಲಿದ್ದಾರೆ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದ್ದಾರೆ ಎಂದರು.

ABOUT THE AUTHOR

...view details