ಬೆಂಗಳೂರು: ನಗರದಲ್ಲಿ ಮಧ್ಯಾಹ್ನ 12:30ರ ಆಸುಪಾಸಿನಲ್ಲಿ ಹಲವೆಡೆ ಭಾರೀ ಸದ್ದು ಕೇಳಿ ಬಂದಿದೆ. ಪರಿಣಾಮ ಕಿಟಕಿ, ಬಾಗಿಲುಗಳು ಅಲುಗಾಡಿದ್ದು, ಶಬ್ದಕ್ಕೆ ಏನು ಕಾರಣ ಎಂಬುದು ನಿಗೂಢವಾಗಿದೆ.
ಬೆಂಗಳೂರಿನಲ್ಲಿ ಭಾರಿ ಸದ್ದು.. ಕಾರಣ ಮಾತ್ರ ನಿಗೂಢ.. - ಬೆಂಗಳೂರಿನಲ್ಲಿ ಭಾರಿ ಸದ್ದು
ಪ್ರಕೃತಿ ವಿಕೋಪದ ಸೂಚನೆಯೇ, ವಾತಾವರಣದ ವಿಸ್ಮಯವೇ, ಸ್ಫೋಟಕಗಳೇ ಅಥವಾ ಕಾಮಗಾರಿಗಳಿಗೆ ಸಂಬಂಧಿಸಿದ ಸದ್ದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಬೆಂಗಳೂರಿನಲ್ಲಿ ಭಾರಿ ಸದ್ದು
ಗಾಂಧಿನಗರದ ಸುತ್ತಮುತ್ತ, ಬಿಡದಿ, ಬನಶಂಕರಿ, ಕತ್ರಿಗುಪ್ಪೆ, ನಾಗರಭಾವಿ, ಆರ್‌ಆರ್‌ನಗರ, ಎಲೆಕ್ಟ್ರಾನಿಕ್ ಸಿಟಿಯೂ ಸೇರಿದಂತೆ ಹಲವೆಡೆ ಈ ಶಬ್ಧ ಎರಡು ಬಾರಿ ಜೋರಾಗಿ ಕೇಳಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.
ಪ್ರಕೃತಿ ವಿಕೋಪದ ಸೂಚನೆಯೇ, ವಾತಾವರಣದ ವಿಸ್ಮಯವೇ, ಸ್ಫೋಟಕಗಳೇ ಅಥವಾ ಕಾಮಗಾರಿಗಳಿಗೆ ಸಂಬಂಧಿಸಿದ ಸದ್ದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
Last Updated : Jul 2, 2021, 2:49 PM IST