ಕರ್ನಾಟಕ

karnataka

ETV Bharat / state

ಸ್ಥಾಯಿ ಸಮಿತಿ ಎಲೆಕ್ಷನ್​ ಹೆಸರಲ್ಲಿ ಬೃಹತ್ ನಾಟಕ: ಪಕ್ಷಗಳ ನಡುವೆ ನಡೆಯಿತಾ ಒಳ ಒಪ್ಪಂದ? - ಹನ್ನೆರಡು ಸ್ಥಾಯಿ ಸಮಿತಿಗಳ ಚುನಾವಣೆ ಬಹಿಷ್ಕಾರ

ಬಿಬಿಎಂಪಿಯ ಸ್ಥಾಯಿ ಸಮಿತಿ ಚುನಾವಣೆಗೆ ಸಕಲ ಸಿದ್ಧತೆಗಳು ಒಂದೆಡೆ ನಡೆದಿದ್ದರೆ, ಇನ್ನೊಂದೆಡೆ ಚುನಾವಣೆ ಬಹಿಷ್ಕರಿಸಲು ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ.

standing committee election
ಸ್ಥಾಯಿ ಸಮಿತಿ ಚುನಾವಣೆ

By

Published : Dec 4, 2019, 12:31 PM IST

ಬೆಂಗಳೂರು:ಬೆಂಗಳೂರು ಮಹಾನಗರ ಪಾಲಿಕೆಯ ಹನ್ನೆರಡು ಸ್ಥಾಯಿ ಸಮಿತಿಗಳ ಚುನಾವಣೆ ಬಹಿಷ್ಕಾರ ಮಾಡಲು ಮೂರೂ ಪಕ್ಷಗಳು ಸಿದ್ಧತೆ ನಡೆಸಿವೆ.

ನಗರದ ಟೌನ್ ಹಾಲ್ ನಲ್ಲಿ ಚುನಾವಣೆ ನಡೆಸಲು, ನಾಮಪತ್ರ ಸ್ವೀಕರಿಸಲು ಅಧಿಕಾರಿಗಳು ಎಲ್ಲಾ ಸಿದ್ಧತೆ ನಡೆಸಿದ್ದರು. ಆದರೆ, ಯಾವ ಪಾಲಿಕೆ ಸದಸ್ಯರು ಟೌನ್ ಹಾಲ್ ಒಳಗೆ ಪ್ರವೇಶಿಸುತ್ತಿಲ್ಲ. ಯಾರೂ ನಾಮಪತ್ರ ಸಲ್ಲಿಸದಂತೆ ಪಕ್ಷಗಳ ಮುಖಂಡರು ನೋಡಿಕೊಳ್ಳುತ್ತಿದ್ದಾರೆ.

ಉಪಚುನಾವಣೆ ಹಿನ್ನೆಲೆ ಎಲೆಕ್ಷನ್ ಮುಂದೂಡಿಕೆಗೆ ಬಿಜೆಪಿಯ ಶಾಸಕರು, ಹಾಗೂ ಪಾಲಿಕೆ ಸದಸ್ಯರು ಮನವಿ ಮಾಡಿದ್ದರು. ಬಿಜೆಪಿ ಮನವಿ ತಿರಸ್ಕರಿಸಿ, ಕಾನೂನಿನಂತೆ ಚುನಾವಣೆ ನಡೆಸುತ್ತಿರುವ ಹರ್ಷ ಗುಪ್ತಾ ನಿರ್ಧಾರಕ್ಕೆ ಸಹಕರಿಸದೇ ಇರಲು ಪಾಲಿಕೆ ಸದಸ್ಯರು ನಿರ್ಧರಿಸಿದ್ದಾರೆ. ಎಂಟು ಗಂಟೆಯಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದರೂ ಈವರೆಗೆ ಒಂದೇ ಒಂದು ನಾಮಪತ್ರ ಸಲ್ಲಿಕೆ ಆಗಿಲ್ಲ. ಕೋರಂ ಇಲ್ಲದೇ ಹೋದರೆ ಚುನಾವಣೆ ಮುಂದೂಡಿಕೆ ಮಾಡಲೇಬೇಕಾಗುತ್ತದೆ ಎಂಬ ಕಾರಣಕ್ಕೆ ಪಾಲಿಕೆ ಸದಸ್ಯರು ಟೌನ್ ಹಾಲ್ ಹತ್ತಿರ ಬರದಂತೆ ಮುಖಂಡರು ಸೂಚಿಸಿದ್ದಾರೆ ಎನ್ನಲಾಗಿದೆ.

ಸ್ಥಾಯಿ ಸಮಿತಿ ಚುನಾವಣೆ ಹೆಸರಲ್ಲಿ ಬೃಹತ್ ನಾಟಕ


ಮೇಯರ್ ಗೆ ಸಾಥ್ ನೀಡಿದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್:
ಟೌನ್ ಹಾಲ್ ಮುಂಭಾಗದಲ್ಲಿ ಬಂದಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು, ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದಾರೆ. ಒಂದೆಡೆ ಚುನಾವಣೆಯಲ್ಲಿ ಯಾರೂ ಭಾಗವಹಿಸದಂತೆ ಮೇಯರ್ ನೋಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಚುನಾವಣೆ ನಡೆಸಲು ಸಕಲ ಸಿದ್ಧತೆಯೊಂದಿಗೆ ಚುನಾವಣಾಧಿಕಾರಿಗಳು ಕಾಯುತ್ತಿದ್ದಾರೆ.

ABOUT THE AUTHOR

...view details