ಬೆಂಗಳೂರು: ಐಎಂಎ ಸಂಸ್ಥೆಯ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಇಂದು ತಿಲಕ್ ನಗರ ಮತ್ತು ಯಶವಂತಪುರ ಐಎಂಎ ಗೋಲ್ಡ್ ಮಳಿಗೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡಿದೆ.
ಐಎಂಎ ವಂಚನೆ ಕೇಸ್: ಎಸ್ಐಟಿಯಿಂದ ಅಪಾರ ಪ್ರಮಾಣದ ಚಿನ್ನಾಭರಣ ಜಪ್ತಿ
ಐಎಂಎ ಸಂಸ್ಥೆಯ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಇಂದು ತಿಲಕ್ ನಗರ ಮತ್ತು ಯಶವಂತಪುರ ಐಎಂಎ ಗೋಲ್ಡ್ ಮಳಿಗೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡಿದೆ.
ಮನ್ಸೂರ್
ನಗರದ ತಿಲಕ್ ನಗರ ಮಳಿಗೆಯಲ್ಲಿ ಅಂದಾಜು 41,69 ಲಕ್ಷ ಬೆಲೆ ಬಾಳುವ 1 ಕೆಜಿ 300 ಗ್ರಾಂ ಚಿನ್ನ, ಹಾಗೆಯೇ 2.20 ಲಕ್ಷ ಮೌಲ್ಯದ 55 ಕೆಜಿ ತೂಕದ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಯಶವಂತಪುರ ಮಳಿಗೆಯಲ್ಲಿ ಅಂದಾಜು ಬೆಲೆ 31-04 ಲಕ್ಷ ಮೌಲ್ಯದ 970 ಗ್ರಾಂ ಚಿನ್ನದ ಆಭರಣ, 8.40 ಲಕ್ಷ ಬೆಲೆ ಬಾಳುವ 21 ಕೆಜಿ ಬೆಳ್ಳಿಯ ವಸ್ತುಗಳು ಮತ್ತು 2 ಸಾವಿರ ನಗದು ಸೇರಿ ಪ್ರಮುಖ ದಾಖಲೆಗಳನ್ನು ವಶಪಡಿಕೊಳ್ಳಲಾಗಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.