ಬೆಂಗಳೂರು:ನಗರದಲ್ಲಿ ಮಾಸ್ಕ್ ಧರಿಸದ ಜನರಿಂದ ದಿನವೊಂದಕ್ಕೆ ಲಕ್ಷ ಲಕ್ಷ ರೂಪಾಯಿ ದಂಡ ವಸೂಲಿ ಆಗುತ್ತಿದೆ. ರಾಜಧಾನಿಯಲ್ಲಿ ಮಾಸ್ಕ್ ಕಡ್ಡಯಗೊಳಿಸಿ, ದಂಡ ವಿಧಿಸಲು ಆರಂಭವಾದ 2020ರ ಮೇ ತಿಂಗಳಿಂದ ಈವರೆಗೂ ಬರೋಬ್ಬರಿ 15,72,30,620 ರೂ. ಸಂಗ್ರಹವಾಗಿದೆ.
ಇದೀಗ ನಗರದಲ್ಲಿ ಮತ್ತೆ ಕೋವಿಡ್ ಹರಡುವಿಕೆ ಹೆಚ್ಚಾಗುತ್ತಿದ್ದಂತೆ ಮಾರ್ಷಲ್ಗಳ ತಂಡ ಮತ್ತಷ್ಟು ಅಲರ್ಟ್ ಆಗಿದೆ. ಜನ ಮೈಮರೆತು ಓಡಾಡಿದರೂ ದಂಡ ಹಾಕುವುದು ಖಚಿತ. ಮಾಸ್ಕ್ ಇದ್ದರೂ, ಸರಿಯಾಗಿ ಧರಿಸಿರದಿದ್ದರೂ ದಂಡ ತೆರಬೇಕಾಗುತ್ತದೆ. ಮಾಸ್ಕ್ ನಿಯಮ ಉಲ್ಲಂಘಿಸಿದವರಿಗೆ 250 ರೂಪಾಯಿ ದಂಡ ವಿಧಿಸಲಾಗುತ್ತದೆ. ಕೇವಲ ಜನವರಿ ತಿಂಗಳ 13 ದಿನಗಳಲ್ಲೇ, 35,31,750 ರೂಪಾಯಿ ದಂಡ ವಸೂಲಿಯಾಗಿದೆ.
ಶುಕ್ರವಾರ ಒಂದು ದಿನದ ದಂಡ:
ಮಾಸ್ಕ್ ಪ್ರಕರಣ - 910
ದಂಡ - 2,27,500 ರೂ.
ಸಾಮಾಜಿಕ ಅಂತರ - 22
ಒಟ್ಟು - 2,33,000 ರೂ.