ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಸದ್ಯ ಆ್ಯಂಬುಲೆನ್ಸ್ ಕೊರತೆ ಇದೆಯಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಯಾಕಂದ್ರೆ ವ್ಯಕ್ತಿಯೋರ್ವ ಜ್ವರದಿಂದ ಬಳಲಿ ವ್ಯಕ್ತಿವೋರ್ವ ಫ್ಲೈ ಓವರ್ ಬಳಿ ಬಿದ್ದು ಮೂರು ಗಂಟೆಯಾದರು ಕೂಡ ಸ್ಥಳಕ್ಕೆ ಆ್ಯಂಬುಲೆನ್ಸ್ ಬಂದಿಲ್ಲ.
ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಆಸರೆಯಾದ ಹೊಯ್ಸಳ: ಸ್ಥಳಕ್ಕೆ ಬಾರದ ಆ್ಯಂಬುಲೆನ್ಸ್ - ಕೊರೊನಾ
ವ್ಯಕ್ತಿಯೋರ್ವ ಜ್ವರದಿಂದ ಬಳಲಿ ತುಮಕೂರು ರಸ್ತೆ ಫ್ಲೈಓವರ್ ಬಳಿ ಬಿದ್ದು ಮೂರು ಗಂಟೆಯಾದರು ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ಹೋಯ್ಸಳ ವಾಹನದಲ್ಲೇ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.
Hoysala
ಬೆಳಗ್ಗೆ ತುಮಕೂರು ರಸ್ತೆ ಫ್ಲೈ ಓವರ್ ಬಳಿ ವ್ಯಕ್ತಿ ಬಿದ್ದಿದ್ದ. ತಕ್ಷಣ ಸ್ಥಳೀಯರು ಪೀಣ್ಯಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದ ತಕ್ಷಣ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಕರೆ ಮಾಡಿ ಮೂರು ಗಂಟೆಯಾದರು ಸ್ಥಳಕ್ಕೆ ಆ್ಯಂಬುಲೆನ್ಸ್ ಬರದಿರುವುದನ್ನು ಕಂಡು ಪೀಣ್ಯಾ ಹೊಯ್ಸಳ ವಾಹನದ ಪೊಲೀಸರೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು.
ಸದ್ಯ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದು, ಜ್ವರ ಇರುವ ಕಾರಣ ಕೊರೊನಾ ಅನುಮಾನದ ಮೇರೆಗೆ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ.