ಬೆಂಗಳೂರು :ಸೋಂಕು ತಡೆಗೆ ಮುಖ ಮುಟ್ಟಿಕೊಳ್ಳಬಾರದೆಂದು ಸಲಹೆ ನೀಡಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮುಖ ಮುಟ್ಟಿಕೊಳ್ಳುವುದನ್ನು ತಡೆಯುವುದು ಹೇಗೆ? ವಿಡಿಯೋ ವೈರಲ್ - bangalore latest news
ವಿಶ್ವದಲ್ಲಿ ಮಹಾಮಾರಿಯಂತೆ ಹಬ್ಬುತ್ತಿರುವ ಕೊರೊನಾ ವೈರಸ್ ತಡೆಗೆ ಸಾಕಷ್ಟು ವಿಡಿಯೋಗಳು ಹಾಗೂ ಸಂದೇಶಗಳು ಸರ್ಕಾರದಿಂದ ಹಾಗೂ ಕೆಲ ವೈದ್ಯರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮನುಷ್ಯ ದಿನಕ್ಕೆ 1000-1500ಕ್ಕೂ ಹೆಚ್ಚು ಬಾರಿ ಮುಖ ಮುಟ್ಟಿಕೊಳ್ಳುತ್ತಾನೆ. ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ ತಡೆಗೆ ಮುಖ ಮುಟ್ಟಿಕೊಳ್ಳಬಾರದು ಎಂದು ವೈದ್ಯರು ಹೇಳುತ್ತಾರೆ. ಆದರೆ, ಮುಖವನ್ನ ಗೊತ್ತಿಲ್ಲದೇ ಮುಟ್ಟಿ ಕೊಳ್ಳಬಾರದು ಎಂದರೆ ರೋಮನ್ ಅಂಕಿಗಳಲ್ಲಿ 2 ಆಕಾರದಂತೆ ಸೆಲ್ಲೋ ಟೇಪ್ ಬಳಿಸಿ ಕೈಗಳಿಗೆ(ಮೊಣಕೈ) ಅಂಟಿಸಿಕೊಳ್ಳಬೇಕು. ಹೀಗೆ ಅಂಟಿಸಿಕೊಳ್ಳುವುದರಿಂದ ನಾವು ಗೊತ್ತಿಲ್ಲದೇ ಮುಖವನ್ನು ಮುಟ್ಟಲು ಕೈಯೆತ್ತಿದರೆ ಸೆಲ್ಲೋ ಟೇಪ್ ಇರುವ ಕಾರಣ ನಮಗೆ ಮುಖ ಮುಟ್ಟಿ ಕೊಳ್ಳಬಾರದು ಎಂದು ಅರಿವಾಗುತ್ತದೆ.
ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಶ್ವದಲ್ಲಿ ಮಹಾಮಾರಿಯಂತೆ ಹಬ್ಬುತ್ತಿರುವ ಕೊರೊನಾ ವೈರಸ್ ತಡೆಗೆ ಸಾಕಷ್ಟು ವಿಡಿಯೋಗಳು ಹಾಗೂ ಸಂದೇಶಗಳು ಸರ್ಕಾರದಿಂದ ಹಾಗೂ ಕೆಲ ವೈದ್ಯರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.