ಕರ್ನಾಟಕ

karnataka

ETV Bharat / state

ಶಿಕ್ಷಣ, ನಗರಾಭಿವೃದ್ಧಿ ಇಲಾಖೆಗೆ ಸಿಂಹಪಾಲು... ಬಿಎಸ್​ವೈ ಬಜೆಟ್​​ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟು ಅನುದಾನ? - budget 2020 karnataka

ಸಿಎಂ ಬಿ.ಎಸ್​. ಯಡಿಯೂರಪ್ಪ ಇಂದು ಏಳನೇ ಬಜೆಟ್​ ಮಂಡಿಸಿದ್ದಾರೆ. ಸುಮಾರು 2.37 ಲಕ್ಷ ಕೋಟಿ ರೂ. ಗಾತ್ರದ ಬಜೆಟ್​ ಇದಾಗಿದೆ.

Yeddiyurappa in the budge
ಯಡಿಯೂರಪ್ಪ ಬಜೆಟ್

By

Published : Mar 5, 2020, 2:08 PM IST

ಬೆಂಗಳೂರು: ಸಿಎಂ ಬಿ.ಎಸ್​​​. ಯಡಿಯೂರಪ್ಪ 2.37 ಲಕ್ಷ ಕೋಟಿ ರೂ. ಗಾತ್ರದ ಬೆಜೆಟ್​​ನನ್ನು ಮಂಡಿಸಿದ್ದಾರೆ. ಸಿಎಂ ತಮ್ಮ ಬಜೆಟ್​​ನಲ್ಲಿ ನೀಡಿರುವ ಇಲಾಖಾವಾರು ಅನುದಾನ ಹಂಚಿಕೆ ಹೀಗಿದೆ.

- ಶಿಕ್ಷಣ ಇಲಾಖೆ - 29,768 ಕೋಟಿ ರೂ.

- ನಗರಾಭಿವೃದ್ಧಿ ಇಲಾಖೆ - 27,952 ಕೋಟಿ ರೂ.

- ಜಲಸಂಪನ್ಮೂಲ ಇಲಾಖೆ - 21,308 ಕೋಟಿ ರೂ.

- ಇಂಧನ ಇಲಾಖೆ - 17,290 ಕೋಟಿ ರೂ.

- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ - 15,595 ಕೋಟಿ ರೂ.

- ಕಂದಾಯ ಇಲಾಖೆ - 11,860 ಕೋಟಿ ರೂ.

- ಲೋಕೋಪಯೋಗಿ ಇಲಾಖೆ - 11,463 ಕೋಟಿ ರೂ.

- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - 10,122 ಕೋಟಿ ರೂ.

- ಒಳಾಡಳಿತ ಮತ್ತು ಸಾರಿಗೆ ಇಲಾಖೆ - 10,108 ಕೋಟಿ ರೂ.

- ಸಮಾಜ ಕಲ್ಯಾಣ ಇಲಾಖೆ - 9,444 ಕೋಟಿ ರೂ.

- ಕೃಷಿ ಮತ್ತು ತೋಟಗಾರಿಕೆ ಇಲಾಖೆ - 7,889 ಕೋಟಿ ರೂ.

- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ - 4,650 ಕೋಟಿ ರೂ.

- ವಸತಿ ಇಲಾಖೆ - 2,971 ಕೋಟಿ ರೂ.

- ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ - 2,68 ಕೋಟಿ ರೂ.

- ಇತರೆ- 84,023 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.

ABOUT THE AUTHOR

...view details