ಕರ್ನಾಟಕ

karnataka

ETV Bharat / state

Karnataka Budget: ಯಾವ ಇಲಾಖೆಗೆ ಎಷ್ಟು ಅನುದಾನ ಹಂಚಿಕೆ; ಇವುಗಳಿಗೆ ಆದಾಯ ಸಂಗ್ರಹ ಹೇಗೆ? - ಕಲ್ಯಾಣ ರಾಜ್ಯದ ಕನಸಿನ ಬಜೆಟ್

ಬಜೆಟ್​ ಮಂಡನೆ ವೇಳೆ ಆರ್ಥಿಕತೆ ಸುಧಾರಿಸುವಲ್ಲಿ ಹಿಂದಿನ ಸರ್ಕಾರ ಸೋತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

How much grant is allocated to Department in Siddaramaiah Budget
How much grant is allocated to Department in Siddaramaiah Budget

By

Published : Jul 7, 2023, 1:53 PM IST

Updated : Jul 7, 2023, 3:44 PM IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24 ರ ಸಾಲಿನ ಮಧ್ಯಂತರ ಬಜೆಟ್​ ಅನ್ನು ಇಂದು ಮಂಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ನಡುವೆ ಹಲವು ಯೋಜನೆಗಳಿಗೆ ಒತ್ತು ನೀಡಿ ಮಂಡಿಸಿರುವ ಸಿದ್ದರಾಮಯ್ಯ ಬಜೆಟ್​ನಲ್ಲಿ ಈ ಹಿಂದಿನ ಸರ್ಕಾರವನ್ನು ಟೀಕಿಸಿದರು. ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುತ್ತದೆ. ಕೋವಿಡ್‌ನಿಂದ ತತ್ತರಿಸಿದ ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಹಿಂದಿದ್ದ ಸರ್ಕಾರವು ವಿಫಲವಾಗಿದೆ ಎಂದು ದೂರಿದರು.

ಕಲ್ಯಾಣ ರಾಜ್ಯದ ಕನಸಿನ ಬಜೆಟ್ ಅನ್ನು ಮಂಡಿಸಿರುತ್ತಿರುವುದಾಗಿ ಹೇಳಿದ ಅವರು, 2022-23ರ ಅಂತ್ಯಕ್ಕೆ ಬಾಕಿ ಉಳಿಸಿರುವ ಕಾಮಗಾರಿಗಳ ಒಟ್ಟು ಮೊತ್ತವು 2,55,102 ಕೋಟಿ ರೂ.ಗಳಾಗಿದ್ದು, ಇದನ್ನು ಪೂರ್ಣಗೊಳಿಸಲು ಕನಿಷ್ಟ ಆರು ವರ್ಷಗಳು ಬೇಕಾಗಿದ್ದು, ನಮ್ಮ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ ಎಂದರು. ಈ ಬಜೆಟ್​ನ ಗಾತ್ರ ಬಜೆಟ್​​ ಗಾತ್ರ 3 ಲಕ್ಷದ 27 ಸಾವಿರ ಕೋಟಿ ರೂ ಆಗಿದೆ. ಇನ್ನು ಈ ಬಜೆಟ್​​ನಲ್ಲಿ ವಿವಿಧ ಕ್ಷೇತ್ರಗಳಿಗೆ ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ. ಮತ್ತು ರಾಜ್ಯಕ್ಕೆ ಆದಾಯಗಳ ನಿರೀಕ್ಷೆ ಏನು ಎಂಬ ಕುರಿತು ಮಾಹಿತಿ ಇಲ್ಲಿದೆ.

ಯಾವ ಇಲಾಖೆಗೆ ಎಷ್ಟು ಹಂಚಿಕೆ

ಶಿಕ್ಷಣ ಇಲಾಖೆ : 37597 ಕೋಟಿ ರೂ ಅನುದಾನ ಹಂಚಿಕೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ: 24166 ಕೋಟಿ ರೂ

ಇಂಧನ ಇಲಾಖೆ 22.773 ಕೋಟಿ ರೂ

ನಗರಾಭಿವೃದ್ಧಿ ಮತ್ತು ನೀರಾವರಿ ಇಲಾಖೆ: 19.44 ಕೋಟಿ ರೂ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಗೆ: 18 .38 ಕೋಟಿ ವೆಚ್ಚ

ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 16. 638 ಕೋಟಿ ರೂ ವೆಚ್ಚ

ಕಂದಾಯ ಇಲಾಖೆಗೆ: 16167 ಕೋಟಿ ರೂ ಅನುದಾನ ಹಂಚಿಕೆ

ಆರೋಗ್ಯ ಮತ್ತು ಕುಟುಂಬ ಇಲಾಖೆಗೆ 14 950 ಕೋಟಿ ರೂ ವೆಚ್ಚ

ಸಮಾಜ ಕಲ್ಯಾಣ ಇಲಾಖೆ: 11.173 ಕೋಟಿ ರೂ

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ: 10460 ಕೋಟಿ ರೀ

ಲೋಕೋಪಯೋಗಿ ಇಲಾಖೆಗೆ: 10143 ಕೋಟಿ ರೂ

ಕೃಷಿ ಮತ್ತು ತೋಟಗಾರಿಕೆ ಇಲಾಖೆ: 5 860 ಕೋಟಿ ರೂ

ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 324 ಕೋಟಿ ರೂ

ಬಜೆಟ್​​ನಲ್ಲಿ ಆದಾಯದ ನಿರೀಕ್ಷೆ

ವಾಣಿಜ್ಯ ತೆರಿಗೆಗಳಿಂದ (ಜಿಎಸ್​ಟಿ ಸೇರಿ) 1.1000 ಕೋಟಿ ಆದಾಯ ನಿರೀಕ್ಷೆ

ಅಬಕಾರಿ ಇಲಾಖೆಯಿಂದ 36.000 ಕೋಟಿ ರೂ

ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯಿಂದ 25000 ಕೋಟಿ ರೂ

ಮೋಟಾರು ವಾಹನ ತೆರಿಗೆಗಳಿಂದ 11.500 ಕೋಟಿ ರೂ

ಇತರೆ ತೆರಿಗೆಯಿಂದ 2153 ಕೋಟಿ ರೂ

ಗಣಿ ಮತ್ತು ಭೂ ವಿಜ್ಞಾನ; 9.000 ಕೋಟಿ ರೂ

ಒಟ್ಟು 2,38,410 ಕೋಟಿ ರೂ ರಾಜಸ್ವ ಜಮೆ. ಸ್ವಂತ ತೆರಿಗೆ, ಜಿಎಸ್​ಟಿ ಪರಿಹಾರ ಎಲ್ಲವನ್ನು ಒಳಗೊಂಡಂತೆ 1.75,653 ಕೋಟಿ ಸಂಗ್ರಹ. ತೆರಿಗೆಯೇತರ ರಾಜಸ್ವಗಳಿಂದ ಸಂಗ್ರಹ 12.500 ಕೋಟಿ ರೂ. ಆಗಿದೆ.

ಇದನ್ನೂ ಓದಿ: ಪುನೀತ್​ ಸ್ಮರಣಾರ್ಥ ಆರೋಗ್ಯ ವ್ಯವಸ್ಥೆಗಾಗಿ 6 ಕೋಟಿ ರೂ. ಅನುದಾನ ಮೀಸಲು

Last Updated : Jul 7, 2023, 3:44 PM IST

ABOUT THE AUTHOR

...view details