ಕರ್ನಾಟಕ

karnataka

ರಾಜ್ಯದ ಕುಡಿಯುವ ನೀರಿನ ಘಟಕಗಳು, ನಿರ್ಮಾಣಕ್ಕೆ ತಗುಲಿದ ವೆಚ್ಚವೆಷ್ಟು ಗೊತ್ತಾ?

By

Published : Mar 15, 2020, 5:23 PM IST

ಸರ್ಕಾರ ಅಳವಡಿಸಿದ ಎಲ್ಲಾ ಘಟಕಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದು ನಿಜ. ಆದರೆ ಸಮಾಧಾನದ ಸಂಗತಿ ಎಂದರೆ ಶೇ.75ರಷ್ಟು ಘಟಕಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿವೆ.

drinking water units in state
ಕುಡಿಯುವ ನೀರಿನ ಘಟಕ

ಬೆಂಗಳೂರು: ರಾಜ್ಯಾದ್ಯಂತ ಸರ್ಕಾರ ನಿರ್ಮಿಸಿರುವ ಕುಡಿಯುವ ನೀರಿನ ಘಟಕಗಳಲ್ಲಿ ಹೆಚ್ಚಿನವು ಕೆಟ್ಟಿವೆ ಎನ್ನುವ ಆರೋಪ ನಿರಂತರವಾಗಿ ಕೇಳಿಬರುತ್ತಿದೆ. ಆದರೆ ಇದೀಗ ಇದಕ್ಕೆ ಸರ್ಕಾರದಿಂದಲೇ ಉತ್ತರ ಸಿಕ್ಕಿದೆ.

ಸರ್ಕಾರ ಅಳವಡಿಸಿದ ಎಲ್ಲಾ ಘಟಕಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದು ನಿಜ. ಆದರೆ ಸಮಾಧಾನದ ಸಂಗತಿ ಎಂದರೆ ಶೇ.75ರಷ್ಟು ಘಟಕಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿವೆ. ಒಟ್ಟು ಅನುಷ್ಠಾನಗೊಂಡಿರುವ ಘಟಕಗಳು 17,154 ಆಗಿದ್ದರೆ, ಇದರಲ್ಲಿ 12,602 ಘಟಕ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ 4,552 ಘಟಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಅಳವಡಿಸಿದ ಘಟಕಗಳಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಹಾವೇರಿ, ಕೋಲಾರ, ರಾಮನಗರ, ತುಮಕೂರು, ಉಡುಪಿ, ಉತ್ತರ ಕನ್ನಡ ಮತ್ತಿತರ ಜಿಲ್ಲೆಯಲ್ಲಿ ಘಟಕ ಸುಸ್ಥಿತಿಯಲ್ಲಿರುವುದೇ ಹೆಚ್ಚು. ಇನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿನಿಧಿಸುವ ಶಿವಮೊಗ್ಗ, ಅಲ್ಲದೆ ಯಾದಗಿರಿ, ವಿಜಯಪುರ, ಮಂಡ್ಯ, ಕೊಪ್ಪಳ ಕೊಡಗು, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಯಲ್ಲಿ ಘಟಕಗಳು ಸಮ ಸ್ಥಿತಿಯಲ್ಲಿ, ಸುಸ್ಥಿತಿ ಹಾಗೂ ದುಸ್ಥಿತಿಯಲ್ಲಿವೆ.

ಚೆನ್ನಾಗಿರುವುದಕ್ಕಿಂತ ಕೆಟ್ಟಿರುವ ಘಟಕಗಳೇ ಹೆಚ್ಚಿರುವುದು ಬೀದರ್, ಚಾಮರಾಜನಗರ, ದಕ್ಷಿಣ ಕನ್ನಡ, ಧಾರವಾಡ, ಕಲಬುರುಗಿ ಜಿಲ್ಲೆಗಳು. ಇಲ್ಲಿ ಸುಸ್ಥಿತಿಗಿಂತ ದುಸ್ಥಿತಿಯಲ್ಲಿರುವ ಘಟಕಗಳೇ ಹೆಚ್ಚು. 2011-12ನೇ ಸಾಲಿನಲ್ಲಿ 146.5 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಇದುವರೆಗೂ ಒಟ್ಟು 146.5 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದನ್ನು ವಾರ್ಷಿಕವಾಗಿ ಮಾಡಲಾದ ಹಂಚಿಕೆ ಗಮನಿಸಿದರೆ, 2011-12ರಲ್ಲಿ 15 ಕೋಟಿ ರೂ., 2012-13ರಲ್ಲಿ 26 ಕೋಟಿ ರೂ., 2013-14ರಲ್ಲಿ 131 ಕೋಟಿ ರೂ., 2014-15ರಲ್ಲಿ 14 ಕೋಟಿ ರೂ., 2015-16ರಲ್ಲಿ 321 ಕೋಟಿ ರೂ., 2016-17ರಲ್ಲಿ 318 ಕೋಟಿ ರೂ., 2017-18ರಲ್ಲಿ 312 ಕೋಟಿ ರೂ., 2018-19ರಲ್ಲಿ 283 ಕೋಟಿ ರೂ., 2020ರ ಜನವರಿ ಅಂತ್ಯಕ್ಕೆ 42 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ABOUT THE AUTHOR

...view details