ETV Bharat Karnataka

ಕರ್ನಾಟಕ

karnataka

ETV Bharat / state

ದ್ವಿತೀಯ ಪಿಯುಸಿ ಪರೀಕ್ಷೆ: ಇಂದು ಗೈರಾದ ವಿದ್ಯಾರ್ಥಿಗಳೆಷ್ಟು? - ಕರ್ನಾಟಕ ದ್ವೀತಿಯ ಪಿಯುಸಿ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ

ದ್ವಿತೀಯ ಪಿಯುಜಿ ಪರೀಕ್ಷೆ ಈಗಾಗಲೇ ಆರಂಭವಾಗಿದ್ದು ಇಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಭಾಷೆಗಳಿಗೆ ಪರೀಕ್ಷೆ ನಡೆಯಿತು.

PUC Exam
ದ್ವಿತೀಯ ಪಿಯುಸಿ ಪರೀಕ್ಷೆ
author img

By

Published : Apr 27, 2022, 7:36 PM IST

Updated : Apr 27, 2022, 7:50 PM IST

ಬೆಂಗಳೂರು: ರಾಜ್ಯಾದ್ಯಂತ ಏಪ್ರಿಲ್‌ 22 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಶುರುವಾಗಿದೆ. ಇಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಭಾಷೆಗಳಿಗೆ ಪರೀಕ್ಷೆ ನಡೆದಿದೆ.

  • ಸಂಸ್ಕ್ರತ ಪರೀಕ್ಷೆಗೆ 20,307 ವಿದ್ಯಾರ್ಥಿಗಳು ನೋಂದಾಯಿಸಿದ್ದು, 19,960 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 347 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
  • ತಮಿಳು ವಿಷಯಕ್ಕೆ 286 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 18 ಗೈರು ಹಾಜರು ಹಾಗೂ 268 ಹಾಜರಾಗಿದ್ದಾರೆ.
  • ತೆಲಗು ವಿಷಯಕ್ಕೆ 78 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 67 ಹಾಜರು, 10 ವಿದ್ಯಾರ್ಥಿಗಳು ಗೈರಾಗಿದ್ದಾರೆ.
  • ಉರ್ದು ವಿಷಯಕ್ಕೆ 11,237 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 1,117 ಗೈರು ಆಗಿದ್ದರೆ, 10,120 ಹಾಜರಾಗಿದ್ದಾರೆ.
  • ಫ್ರೆಂಚ್ ವಿಷಯಕ್ಕೆ 2,881 ನೋಂದಣಿ ಮಾಡಿಕೊಂಡಿದ್ದು, 40 ಗೈರು, 2841 ಹಾಜರಾಗಿದ್ದಾರೆ.
  • ಮಲಯಾಳಂ ವಿಷಯಕ್ಕೆ 9 ನೋಂದಣಿ, ಒಬ್ಬ ವಿದ್ಯಾರ್ಥಿ ಗೈರು, 8 ಹಾಜರು.
  • ಮರಾಠಿ ವಿಷಯಕ್ಕೆ 2,464 ನೋಂದಣಿ, 172 ಗೈರು, 2,310 ಹಾಜರು.

ಪರೀಕ್ಷಾ ಅಕ್ರಮ, ಅವ್ಯವಹಾರದಲ್ಲಿ ಯಾರು ಭಾಗಿಯಾಗಿಲ್ಲ. ಯಾವುದೇ ವಿದ್ಯಾರ್ಥಿಯು ಡಿಬಾರ್ ಆಗಿಲ್ಲ. ಯಾವುದೇ ವಿದ್ಯಾರ್ಥಿಗೆ ಕೋವಿಡ್ ಸೋಂಕು ದೃಢಪಟ್ಟಿಲ್ಲ ಎಂದು ಪಿಯು ಬೋರ್ಡ್ ತಿಳಿಸಿದೆ.

ಇದನ್ನೂ ಓದಿ:'ಹಿಂದಿ ರಾಷ್ಟ್ರೀಯ ಭಾಷೆಯಲ್ಲ' ಎಂದ ಸುದೀಪ್‌ಗೆ ಅಜಯ್‌ ದೇವಗನ್ ಖಾರ ಪ್ರತಿಕ್ರಿಯೆ; ನೆಟ್ಟಿಗರಿಂದ ತರಾಟೆ

Last Updated : Apr 27, 2022, 7:50 PM IST

ABOUT THE AUTHOR

...view details