ಕರ್ನಾಟಕ

karnataka

ETV Bharat / state

ಚೀನಾ ಕೃತ್ಯಕ್ಕೆ ಇನ್ನೆಷ್ಟು ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಲಿದೆ: ಕಾಂಗ್ರೆಸ್ ಪ್ರಶ್ನೆ - ರಾಜ್ಯ ಬಿಜೆಪಿ ನಾಯಕರು

ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿ ನಿರ್ಮಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗ ಇನ್ನೆಷ್ಟು ಆ್ಯಪ್‌ಗಳನ್ನು ಬ್ಯಾನ್ ಮಾಡುವರು?. ಇದಕ್ಕೆ ರಾಜ್ಯ ಬಿಜೆಪಿ ನಾಯಕರು ಯಾವ ಉತ್ತರ ನೀಡಬಹುದು ಎಂದು ಕಾಂಗ್ರೆಸ್ ಕೇಳಿದೆ.

congress to BJP
ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ

By

Published : Jan 19, 2021, 7:44 PM IST

ಬೆಂಗಳೂರು: ಚೀನಾ ದೇಶ ಭಾರತದ ಗಡಿಯಲ್ಲಿ ಗ್ರಾಮವನ್ನೇ ನಿರ್ಮಿಸಿದ್ದು ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಎಷ್ಟು ಆ್ಯಪ್‌ಗಳನ್ನು ಬ್ಯಾನ್ ಮಾಡಲಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

ಚೀನಾದ ಕುತಂತ್ರಕ್ಕೆ ತಕ್ಕ ಉತ್ತರ ಕೊಡುವ ಬದಲು ಕೇಂದ್ರ ಸರ್ಕಾರ ಕೇವಲ ಆ್ಯಪ್‌ಗಳನ್ನು ಬ್ಯಾನ್ ಮಾಡುವುದಕ್ಕೆ ಸೀಮಿತವಾಗಿದೆ. ಚೀನಾ ನಮ್ಮ 20 ಯೋಧರನ್ನು ಕೊಂದಾಗ 59 ಆ್ಯಪ್‌ಗಳು, ಲಡಾಖ್ ಅತಿಕ್ರಮಿಸಿದಾಗ 47 ಆ್ಯಪ್‌ಗಳನ್ನು ಬ್ಯಾನ್ ಮಾಡಲಾಗಿತ್ತು ಎಂದು ಟ್ವೀಟ್‌ ಮೂಲಕ ಟೀಕಿಸಿದೆ.

ಈಗ ಅರುಣಾಚಲದ ಪ್ರದೇಶ ಗಡಿಯೊಳಗೆ ಹಳ್ಳಿ ನಿರ್ಮಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗ ಇನ್ನೆಷ್ಟು ಆ್ಯಪ್‌ಗಳನ್ನು ಬ್ಯಾನ್ ಮಾಡುವರು?. ಇದಕ್ಕೆ ರಾಜ್ಯ ಬಿಜೆಪಿ ನಾಯಕರು ಯಾವ ರೀತಿಯ ಉತ್ತರ ನೀಡಬಹುದು. ಚೀನಾ ಹೆಸರನ್ನೇ ಹೇಳದ 56 ಇಂಚಿನ ಎದೆ ಗಡಿ ರಕ್ಷಣೆಗೆ ದಿಟ್ಟ ಕ್ರಮ ಕೈಗೊಳ್ಳುವುದೇ ಅನುಮಾನ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ:ನೂತನ ಸಚಿವರಿಗೆ ಗುರುವಾರ ಖಾತೆ ಹಂಚಿಕೆ: ಸಿಎಂ ಯಡಿಯೂರಪ್ಪ

ABOUT THE AUTHOR

...view details