ಕರ್ನಾಟಕ

karnataka

ETV Bharat / state

ಬಿಹಾರಿ ವ್ಯಕ್ತಿಗೆ ಸೋಂಕು ತಗುಲಿದ್ದು ಹೇಗೆ..? ಇಲ್ಲಿದೆ ಪಕ್ಕಾ ಮಾಹಿತಿ..! - ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್

ರಾಜ್ಯ ರಾಜಧಾನಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಬಿಹಾರಿ ಕೊರೊನಾ ಸೋಂಕಿತನ ಪ್ರಕರಣದ ಜಾಡು ಭೇದಿಸಲು ಮುಂದಾದ ಅಧಿಕಾರಿಗಳಿಗೆ ಕೆಲವೊಂದು ಅಂಶಗಳು ತಿಳಿದು ಬಂದಿವೆ.

dsd
ಬಿಹಾರಿ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ..? ಇಲ್ಲಿದೆ ಮಾಹಿತಿ..!

By

Published : Apr 29, 2020, 4:42 PM IST

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬಿಹಾರ ಮೂಲದ ಕೂಲಿ ಕಾರ್ಮಿಕನಿಗೆ ಸೋಂಕು ತಗುಲಿದ್ದು ಹೇಗೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಬಿಹಾರ ಮೂಲದ ಕೂಲಿ ಕಾರ್ಮಿಕ 29 ಮಂದಿಗೆ ಸೋಂಕು ‌ಹರಡಲು ಕಾರಣನಾಗಿದ್ದ. ಈತನ ಜಾಡು ಹಿಡಿದು ಮೂಲ ಪತ್ತೆ ಮಾಡಲು ತೆರಳಿದ ತಂಡಕ್ಕೆ ಸದ್ಯ ಸೋಂಕಿತ ರೈಲಿನಲ್ಲಿ ಬಿಹಾರದಿಂದ ಬಂದಿದ್ದ. ಬಿಹಾರಿ ಕೂಲಿ ಕಾರ್ಮಿಕನಿಗೆ ಸೋಂಕು ದೃಢಪಟ್ಟಿದ್ದು, ಏಪ್ರಿಲ್ 22 ರಂದು. ರೈಲಿನಲ್ಲಿ ಪ್ರಯಾಣಿಸಿದಾಗಲೇ ಸೋಂಕು ಹರಡಿರುವ ಅನುಮಾನವನ್ನು ಬಿಬಿಎಂಪಿ ಕಣ್ಗಾವಲು ತಂಡ ವ್ಯಕ್ತಪಡಿಸಿದೆ.‌ ಯಾಕಂದ್ರೆ ಆತ ಓಡಾಡಿರುವ ಯಾವ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಇಲ್ಲ. ಆತ ಕೆಲಸ ಮಾಡಿರುವ ಜಾಗಗಳೂ ಕೂಡ ಕಂಟೇನ್​ಮೆಂಟ್​​​ ವ್ಯಾಪ್ತಿಯಲ್ಲಿ ಇಲ್ಲ.

ಆತ ಬಿಹಾರದಿಂದ ಬಂದು ತಿಂಗಳ ನಂತರ ಸೋಂಕು ದೃಢಪಟ್ಟಿದೆ. ವಿದೇಶದಿಂದ ಬಂದು 21 ದಿನಗಳ ಬಳಿಕ ಸೋಂಕು ತಗುಲಿದ ಉದಾಹರಣೆಗಳಿವೆ.‌ ಕೇರಳದಿಂದ‌ ಬಂದಿದ್ದ ಮಹಿಳೆಗೆ ತಿಂಗಳ ಬಳಿಕ ಸೋಂಕು ತಗುಲಿತ್ತು. ‌ಬಿಹಾರಿ ಕೂಲಿ ಕಾರ್ಮಿಕನಿಗೂ ತಿಂಗಳ ಬಳಿಕ ಸೋಂಕು ಪತ್ತೆಯಾಗಿದೆ.

ಬಿಹಾರಿ ಕೂಲಿ ಕಾರ್ಮಿಕನಿಗೆ ಸೋಂಕು ತಗುಲಿದ್ದರೂ ಅದು ಉಲ್ಬಣ ಆಗುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿದೆ.. ಹೀಗಾಗಿ ಬಿಹಾರಿ ಕೂಲಿ ಕಾರ್ಮಿಕನಿಗೆ ರೈಲು ಪ್ರಯಾಣದ ವೇಳೆ ಸೋಂಕು ತಗುಲಿರುವ ಸಾಧ್ಯತೆ ಹೆಚ್ಚು ಎಂಬ ಅಭಿಪ್ರಾಯಕ್ಕೆ ಬಿಬಿಎಂಪಿ ಅಧಿಕಾರಿಗಳು ಬಂದಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಶಂಕಿತರನ್ನ 14 ದಿನದ ಕ್ವಾರಂಟೈನ್ ಬದಲು, 28 ದಿನಗಳ ಕ್ವಾರಂಟೈನ್ ಮಾಡುವಂತೆ ಆದೇಶಿಸಲಾಗಿದೆ.

ABOUT THE AUTHOR

...view details